ಬೆಂಗಳೂರು: ಎಮ್ವೀ ಫೋಟೊವೊಲ್ಟಾಯಿಕ್ ಕಂಪನಿಯು ಐಪಿಒ ಮೂಲಕ ಷೇರು ಮಾರಾಟ ಮಾಡಿ, ಬಂಡವಾಳ ಸಂಗ್ರಹಿಸಲು ಮುಂದಾಗಿದ್ದು, ಷೇರುಗಳಿಗೆ ಬಿಡ್ ಸಲ್ಲಿಸಲು ನವೆಂಬರ್ 11ರಿಂದ ಅವಕಾಶ ಇರಲಿದೆ.

ಬಿಡ್ ಸಲ್ಲಿಸಲು ನವೆಂಬರ್ 13 ಕಡೆಯ ದಿನವಾಗಿದೆ. ಸಣ್ಣ ಹೂಡಿಕೆದಾರರು ಕನಿಷ್ಠ 69 ಷೇರುಗಳಿಗೆ ಬಿಡ್ ಸಲ್ಲಿಸಬೇಕಾಗುತ್ತದೆ. ಷೇರು ಮಾರಾಟದ ಮೂಲಕ ಕಂಪನಿಯು ₹2,143 ಕೋಟಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಕಂಪನಿಯು ಸೋಲಾರ್ ಮಾಡ್ಯೂಲ್ ಹಾಗೂ ಸೌರಕೋಶಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.