ಗುರುವಾರ , ಏಪ್ರಿಲ್ 2, 2020
19 °C

ಪಿಎಫ್‌ ಬಡ್ಡಿದರ ಶೇ 8.65ಕ್ಕೆ ಕಾರ್ಮಿಕ ಸಚಿವಾಲಯ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿಯ (ಇಪಿಎಫ್‌) ಬಡ್ಡಿ ದರವನ್ನು 2019–20ನೇ ಹಣಕಾಸು ವರ್ಷಕ್ಕೆ ಶೇ 8.65ರಷ್ಟಕ್ಕೆ ಉಳಿಸಿಕೊಳ್ಳಲು ಕಾರ್ಮಿಕ ಸಚಿವಾಲಯ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

2018–19ನೇ ಹಣಕಾಸು ವರ್ಷಕ್ಕೆ ಶೇ 8.65ರಷ್ಟು ಬಡ್ಡಿದರ ನೀಡಲಾಗಿದೆ. ಅಂಚೆ ಕಚೇರಿ ಸಣ್ಣ ಉಳಿತಾಯ ಮತ್ತು ಬ್ಯಾಂಕ್‌ ಬಡ್ಡಿ ಹಾಗೂ ಠೇವಣಿಗಳ ಬಡ್ಡಿ ದರಗಳು ಕಡಿಮೆಯಾಗಿರುವ ಕಾರಣಕ್ಕೆ ಪ್ರಸಕ್ತ ಹಣಕಾಸು ವರ್ಷದ ಬಡ್ಡಿ ದರ ಶೇ 8.5ಕ್ಕೆ ತಗ್ಗಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇಪಿಎಫ್‌ಒನ ಕೇಂದ್ರೀಯ ಧರ್ಮದರ್ಶಿ ಮಂಡಳಿಯು (ಸಿಬಿಟಿ) ಬುಧವಾರ (ಮಾ. 5) ಸಭೆ ಸೇರಲಿದ್ದು, ಬಡ್ಡಿ ದರದ ನಿರ್ಧಾರ ಪ್ರಕಟಿಸಲಿದೆ.

‘ಸಿಬಿಟಿ’ ಸಭೆಯ ಕಾರ್ಯಸೂಚಿ ಅಂತಿಮಗೊಂಡಿಲ್ಲ. ಪ್ರಸಕ್ತ ಹಣಕಾಸು ವರ್ಷಕ್ಕೆ ‘ಇಪಿಎಫ್‌ಒ’ ವರಮಾನವನ್ನು ಅಂದಾಜು ಮಾಡಲು ಸಾಧ್ಯವಾಗಿಲ್ಲ. ವರಮಾನದ ಆಧಾರದ ಮೇಲೆಯೇ ಬಡ್ಡಿದರ ನಿಗದಿಪಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಪಿಪಿಎಫ್‌ ಮತ್ತು ಅಂಚೆ ಉಳಿತಾಯ ಯೋಜನೆಗಳ ಬಡ್ಡಿದರಕ್ಕೆ ಅನುಗುಣವಾಗಿ ಇಪಿಎಫ್‌ ಬಡ್ಡಿದರವನ್ನೂ ನಿಗದಿಪಡಿಸುವಂತೆ ಹಣಕಾಸು ಸಚಿವಾಲಯವು ಕಾರ್ಮಿಕ ಸಚಿವಾಲಯವನ್ನು ಒತ್ತಾಯಿಸುತ್ತಿದೆ. ಕೇಂದ್ರೀಯ ಮಂಡಳಿಯು ನಿಗದಿಪಡಿಸಿದ ಬಡ್ಡಿ ದರ ನೀಡಲು ಕಾರ್ಮಿಕ ಸಚಿವಾಲಯಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆಯ ಅಗತ್ಯವಿದೆ. 

ಬಡ್ಡಿ ದರದ ವಿವರ
ವರ್ಷ; ಬಡ್ಡಿ ದರ (%)
2018–19; 8.65
2017–18; 8.55
2016–17; 8.65
2015–16; 8.80
2014–15; 8.75
2013–14; 8.75
2012–13; 8.50

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು