ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಪಿಎಫ್‌ಒ: 2023–24ರ ಹಣಕಾಸು ವರ್ಷದಲ್ಲಿ 27 ಲಕ್ಷ ಸದಸ್ಯರ ಸೇರ್ಪಡೆ

Published 20 ಏಪ್ರಿಲ್ 2024, 14:40 IST
Last Updated 20 ಏಪ್ರಿಲ್ 2024, 14:40 IST
ಅಕ್ಷರ ಗಾತ್ರ

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) 2023–24ರ ಹಣಕಾಸು ವರ್ಷದಲ್ಲಿ 27 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ. 

2022–23ರ ಹಣಕಾಸು ವರ್ಷದಲ್ಲಿ 1.38 ಕೋಟಿ ಸದಸ್ಯರಿದ್ದರು. ಅದು ಕಳೆದ ಹಣಕಾಸು ವರ್ಷದಲ್ಲಿ 1.65 ಕೋಟಿಗೆ ಹೆಚ್ಚಳವಾಗಿದ್ದು, ಶೇ 19ರಷ್ಟು ಏರಿಕೆಯಾಗಿದೆ. ಇದು ದೇಶದಲ್ಲಿ ಉದ್ಯೋಗ ಪರಿಸ್ಥಿತಿಯ ಸುಧಾರಣೆಯನ್ನು ತೋರಿಸುತ್ತಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ಅಂಕಿ ಅಂಶಗಳ ಪ್ರಕಾರ, ಇಪಿಎಫ್‌ಒಗೆ 2018–19ರಲ್ಲಿ 61.12 ಲಕ್ಷ, 2019–20ರಲ್ಲಿ 78.58 ಲಕ್ಷ ನಿವ್ವಳ ಸೇರ್ಪಡೆಯಾಗಿದ್ದಾರೆ. ಆದರೆ, ಕೊರೊನಾ ನಿರ್ಬಂಧದಿಂದಾಗಿ 2020–21ರಲ್ಲಿ 77.08 ಲಕ್ಷಕ್ಕೆ ಇಳಿಯಿತು. ನಂತರ ಸುಧಾರಣೆ ಕಂಡು 2021–22ರಲ್ಲಿ 1.22 ಕೋಟಿ ಮತ್ತು 2022–23ರಲ್ಲಿ 1.38 ಕೋಟಿ ಸೇರ್ಪಡೆ ಆಗಿದ್ದಾರೆ ಎಂದು ತಿಳಿಸಿದೆ.

ಕಳೆದ ಆರೂವರೆ ವರ್ಷದಲ್ಲಿ 6.1 ಕೋಟಿಗೂ ಅಧಿಕ ಸದಸ್ಯರು ಇಪಿಎಫ್‌ಒಗೆ ಸೇರ್ಪಡೆಯಾಗಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದಲ್ಲಿ ಕಾರ್ಮಿಕರ ಸಹಭಾಗಿತ್ವವು 2017-18ರಲ್ಲಿ ಶೇ.49.8 ರಿಂದ 2022-23ರಲ್ಲಿ ಶೇ.57.9ಕ್ಕೆ ಏರಿಕೆಯಾಗಿದೆ. ನಿರುದ್ಯೋಗ ದರವು ಶೇ 6 ರಿಂದ ಶೇ 3.2ಕ್ಕೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT