ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಕಡಿತ: ಎರಿಕ್ಸನ್ ಕಂಪನಿಯ 8,500 ಸಿಬ್ಬಂದಿ ವಜಾ

ಉದ್ಯೋಗ ಕಡಿತ: 8,500 ಸಿಬ್ಬಂದಿಯನ್ನು ವಜಾ ಮಾಡಿದ ಎರಿಕ್ಸನ್
Last Updated 24 ಫೆಬ್ರವರಿ 2023, 13:51 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್: ಸ್ವೀಡನ್‌ ಮೂಲದ ಟೆಲಿಕಾಂ ಕಂಪನಿ ಎರಿಕ್ಸನ್‌, ತನ್ನ ವೆಚ್ಚ ಕಡಿತ ಯೋಜನೆಯ ಭಾಗವಾಗಿ 8,500 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವುದಾಗಿ ತಿಳಿಸಿದೆ. ಈ ಸಂಬಂಧ ಉದ್ಯೋಗಿಗಳಿಗೆ ಮೆಮೊ ಕಳುಹಿಸಲಾಗಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಸ್ವೀಡನ್‌ನಲ್ಲಿ ಒಟ್ಟು 1,400 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿರುವುದಾಗಿ ಕಂಪನಿಯು ಸೋಮವಾರ ಪ್ರಕಟಿಸಿತ್ತು.

ದೂರಸಂಪರ್ಕ ಕಂಪನಿಗಳು ಆರ್ಥಿಕ ಪರಿಸ್ಥಿತಿಯ ಕಾರಣ ಹೇಳಿ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ವಜಾ ಮಾಡುತ್ತಿವೆಯಾದರೂ, ಇದು (ಎರಿಕ್ಸನ್‌ ಕಂಪನಿಯ ವಜಾ ಮಾಡಿರುವುದು) ಟೆಲಿಕಾಂ ಕ್ಷೇತ್ರದ ದೊಡ್ಡ ಉದ್ಯೋಗ ಕಡಿತವಾಗಿದೆ.

'ಉದ್ಯೋಗ ಕಡಿತವು ದೇಶದಿಂದ ದೇಶಕ್ಕೆ ಅಲ್ಲಿನ ಪರಿಸ್ಥಿತಿಗೆ ಅನುಸಾರವಾಗಿ ಭಿನ್ನವಾಗಿರುತ್ತದೆ. ಹಲವು ದೇಶಗಳಲ್ಲಿ ಕೆಲಸಗಾರರನ್ನು ವಜಾ ಮಾಡುವ ಬಗ್ಗೆ ಮೆಮೊ ನೀಡಲಾಗಿದೆ' ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೊರ್ಜ್‌ ಎಖೋಲ್ಮ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT