ನವದೆಹಲಿ: ‘ಬ್ಯಾಟರಿಗಳು ಹಾಗೂ ಚಾರ್ಜಿಂಗ್ ಸೇವೆ ಮೇಲಿನ ಜಿಎಸ್ಟಿ ಕಡಿತಗೊಳಿಸುವ ಮೂಲಕ ವಿದ್ಯುತ್ಚಾಲಿತ ವಾಹನಗಳ ಸ್ಪರ್ಧಾತ್ಮಕತೆ ಹೆಚ್ಚಳಕ್ಕೆ ಕೇಂದ್ರ ಸರ್ಕಾರವು ಕ್ರಮವಹಿಸಬೇಕು’ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ಎಲೆಕ್ಟ್ರಿಕ್ ವಾಹನಗಳ ಸಮಿತಿ ಅಧ್ಯಕ್ಷೆ ಸುಲಜ್ಜ ಫಿರೋಡಿಯಾ ಮೋಟ್ವಾನಿ ಒತ್ತಾಯಿಸಿದ್ದಾರೆ.

ವಿದ್ಯುತ್ಚಾಲಿತ ವಾಹನಗಳ ಬಗ್ಗೆ ಫಿಕ್ಕಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಚಾರ್ಜಿಂಗ್ ಸೇವೆ ಮತ್ತು ಬ್ಯಾಟರಿಗಳ ಮೇಲೆ ಶೇ 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಇದನ್ನು ಶೇ 5ಕ್ಕೆ ತಗ್ಗಿಸಬೇಕು. ಇ.ವಿ ಸಂಬಂಧಿಸಿ ವಲಯದ ಮೇಲಿನ ಜಿಎಸ್ಟಿ ದರ ಸರಳೀಕರಣಕ್ಕೆ ಸರಕು ಮತ್ತು ಸೇವಾ ತೆರಿಗೆ ಮಂಡಳಿಯು ಕ್ರಮವಹಿಸಬೇಕು ಎಂದರು.

‘ಪಿಎಂ ಇ–ಡ್ರೈವ್’ ಯೋಜನೆಯು ಈ ವಲಯ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿದೆ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.