ನವದೆಹಲಿ: ದೇಶದ ವ್ಯಾಪಾರ ಸರಕುಗಳ ರಫ್ತು ಮೌಲ್ಯವು ಫೆಬ್ರುವರಿ ತಿಂಗಳಲ್ಲಿ ₹ 3.20 ಲಕ್ಷ ಕೋಟಿಗೆ ಇಳಿದಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ.

2024ರ ಫೆಬ್ರುವರಿಯಲ್ಲಿ ರಫ್ತು ಮೌಲ್ಯ ₹ 3.59 ಲಕ್ಷ ಕೋಟಿಯಷ್ಟಾಗಿತ್ತು. ಪೆಟ್ರೋಲ್ ದರದಲ್ಲಿ ಏರಿಳಿತ ಮತ್ತು ಜಾಗತಿಕ ಅನಿಶ್ಚಿತ ಸ್ಥಿತಿಯಿಂದಾಗಿ ರಫ್ತು ಪ್ರಮಾಣ ಸತತ ನಾಲ್ಕನೇ ತಿಂಗಳು ಇಳಿಕೆಯಾಗಿದೆ ಎಂದು ತಿಳಿಸಿದೆ.

ಆಮದು ಮತ್ತು ರಫ್ತು ವಹಿವಾಟಿನ ನಡುವಿನ ವ್ಯತ್ಯಾಸವಾದ ವ್ಯಾಪಾರ ಕೊರತೆ ₹ 1.21 ಲಕ್ಷ ಕೋಟಿಯಷ್ಟಾಗಿದ್ದು, ಆಮದು ಪ್ರಮಾಣ ₹ 4.42 ಲಕ್ಷ ಕೋಟಿಯಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್–ಫೆಬ್ರುವರಿಯಲ್ಲಿ ಸರಕು ಮತ್ತು ಸೇವೆಗಳ ರಫ್ತು ಶೇ 6ರಷ್ಟು ಏರಿಕೆಯಾಗಿದ್ದು, ₹ 65.14 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.