ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿಯಲ್ಲಿ ರಫ್ತು ಅಲ್ಪ ಇಳಿಕೆ

Last Updated 2 ಮಾರ್ಚ್ 2021, 16:03 IST
ಅಕ್ಷರ ಗಾತ್ರ

ನವದೆಹಲಿ: ಎರಡು ತಿಂಗಳಿನಿಂದ ಸಕಾರಾತ್ಮಕ ಹಾದಿಯಲ್ಲಿದ್ದ ದೇಶದ ರಫ್ತು ವಹಿವಾಟು ಫೆಬ್ರುವರಿಯಲ್ಲಿ ಅಲ್ಪ ಇಳಿಕೆ ಕಂಡಿದೆ ಎಂದು ಸರ್ಕಾರ ತಿಳಿಸಿದೆ.

ಫೆಬ್ರುವರಿಯಲ್ಲಿ ದೇಶದ ರಫ್ತು ವಹಿವಾಟು ಶೇ 0.25ರಷ್ಟು ಇಳಿಕೆ ಆಗಿದ್ದು, ಮೌಲ್ಯವು ₹ 2.01 ಲಕ್ಷ ಕೋಟಿಗಳಷ್ಟಾಗಿದೆ.

ಆಮದು ವಹಿವಾಟು ಶೇ 6.98ರಷ್ಟು ಹೆಚ್ಚಾಗಿದ್ದು ₹ 2.96 ಲಕ್ಷ ಕೋಟಿಗಳಿಗೆ ತಲುಪಿದೆ. ವ್ಯಾಪಾರ ಕೊರತೆ ಅಂತರವು ₹ 74,168 ಕೋಟಿಗಳಿಂದ ₹ 94,024 ಕೋಟಿಗಳಿಗೆ ಏರಿಕೆಯಾಗಿದೆ.

ಏಪ್ರಿಲ್‌–ಪೆಬ್ರುವರಿ ಅವಧಿಯಲ್ಲಿ ರಫ್ತು ವಹಿವಾಟು ಶೇ 12.32ರಷ್ಟು ಇಳಿಕೆಯಾಗಿದೆ. ಈ ಅವಧಿಯಲ್ಲಿ ಆಮದು ವಹಿವಾಟು ಶೇ 23ರಷ್ಟು ಕಡಿಮೆಯಾಗಿದೆ.

ಫೆಬ್ರುವರಿಯಲ್ಲಿ ತೈಲ ಆಮದು ಶೇ 16.63ರಷ್ಟು ಕಡಿಮೆಯಾಗಿದೆ. ಚಿನ್ನದ ಆಮದು ಮೌಲ್ಯ ₹ 21,900 ಕೋಟಿಗಳಷ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT