ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಜಿಯೊದಲ್ಲಿ ₹43,574 ಕೋಟಿ ಹೂಡಿದ ಫೇಸ್‌ಬುಕ್

Last Updated 22 ಏಪ್ರಿಲ್ 2020, 2:44 IST
ಅಕ್ಷರ ಗಾತ್ರ

ಬೆಂಗಳೂರು: ಜನಪ್ರಿಯ ಸಾಮಾಜಿಕ ಸಂಪರ್ಕ ಮಾಧ್ಯಮಗಳನ್ನು ಹೊಂದಿರುವ ಫೇಸ್‌ಬುಕ್‌ ದೇಶೀಯ ಸಂಸ್ಥೆಯಾದ ರಿಲಯನ್ಸ್‌ನ ಜಿಯೊದಲ್ಲಿ ಶೇ 9.9ರಷ್ಟು ಷೇರುಗಳನ್ನು ಖರೀದಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಟೆಲಿಕಾಂ ಸೇವೆಗಳನ್ನು ಜಿಯೊ ನೀಡುತ್ತಿದೆ.

ಫೇಸ್‌ಬುಕ್‌ 5.7 ಬಿಲಿಯನ್‌ ಡಾಲರ್‌ (₹43,574 ಕೋಟಿ) ಹೂಡಿಕೆ ಮಾಡುವ ಮೂಲಕ ಜಿಯೊದಲ್ಲಿ ಶೇ 9.9ರಷ್ಟು ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿದೆ. ರಿಲಯನ್ಸ್‌ ಈ ವಹಿವಾಟಿನ ಕುರಿತು ಮುಂಬೈ ಷೇರುಪೇಟೆಗೆ (ಬಿಎಸ್‌ಇ) ಮಾಹಿತಿ ನೀಡಿದೆ.

'ಭಾರತದ ಜನರ ಹಾಗೂ ಭಾರತದ ಆರ್ಥಿಕತೆಗೆ ಅಗತ್ಯವಿರುವುದನ್ನು ಪೂರೈಸುವ ಮೂಲಕ ಈ ಪಾಲುದಾರಿಕೆಯು ಭಾರತದ ಸರ್ವತೋಮುಖ ಬೆಳವಣಿಗೆಗೆ ಪುಷ್ಠಿ ನೀಡಲಿದೆ. ನಮ್ಮ ಗಮನ ಭಾರತದ 6 ಕೋಟಿ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳು, 12 ಕೋಟಿ ರೈತರು, 3 ಕೋಟಿ ಸಣ್ಣ ಗಾತ್ರದ ವ್ಯಾಪಾರಿಗಳು, ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಇದರೊಂದಿಗೆ ಜನರಿಗೆ ಹಲವು ಡಿಜಿಟಲ್‌ ಸೇವೆಗಳ ಕುರಿತು ತಿಳಿಸಿಕೊಡುವುದು' ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ರಿಯಲನ್ಸ್‌ ಜಿಯೊ 38.80 ಕೋಟಿ ಚಂದದಾರರನ್ನು ಹೊಂದಿದೆ. ಪ್ರಸ್ತುತ ಒಡಂಬಡಿಕೆಯಿಂದ ಫೇಸ್‌ಬುಕ್‌ ಮತ್ತು ಜಿಯೊ ಎರಡೂ ಸಂಸ್ಥೆಗಳಿಗೆ ಲಾಭದಾಯವಾಗಲಿದೆ. ಫೇಸ್‌ಬುಕ್‌ ಮತ್ತಷ್ಟು ಭಾರತದ ಗ್ರಾಹಕರನ್ನು ತಲುಪಲು ಸಾಧ್ಯವಾಗಲಿದೆ. ಚೀನಾದ ನಂತರ ಭಾರತ ಅತಿ ದೊಡ್ಡ ಇಂಟರ್‌ನೆಟ್‌ ಮಾರುಕಟ್ಟೆ ಹೊಂದಿದೆ.

ಫೇಸ್‌ಬುಕ್‌ ಭಾರತದಲ್ಲಿ 40 ಕೋಟಿಗೂ ಹೆಚ್ಚು ವಾಟ್ಸ್ಆ್ಯಪ್‌ ಬಳಕೆದಾರರನ್ನು ಹೊಂದಿದ್ದು, ಪಾವತಿ ಸೇವೆಗಳಿಗೆ ಚಾಲನೆ ನೀಡಲು ಯೋಜನೆ ರೂಪಿಸಿದೆ. ಉತ್ತಮ ಟೆಲಿಕಾಂ ಪಾಲುದಾರರನ್ನು ಹೊಂದುವ ಮೂಲಕ ಫೇಸ್‌ಬುಕ್‌ ಜನ ಸಮೂಹಕ್ಕೆ ತಲುಪುವುದು ಸುಲಭವಾಗಲಿದೆ.

ಜಿಯೊ ಡಿಜಿಟಲ್‌ ಕಂಪನಿ ಮಾಡುವ ರಿಲಯನ್ಸ್‌ನ ಮಹಾತ್ವಾಕಾಂಕ್ಷೆಗೆ ಈ ಒಪ್ಪಂದವು ಪೂರಕವಾಗಲಿದೆ. 2021ರ ಮಾರ್ಚ್‌ ವೇಳೆಗೆ ಶೂನ್ಯ ಸಾಲದ ಕಂಪನಿಯಾಗಿ ಹೊರಹೊಮ್ಮಲು ರಿಲಯನ್ಸ್‌ ಪ್ರಯತ್ನಿಸುತ್ತಿದೆ.

ಭಾರತದಲ್ಲಿ ಇಂಟರ್‌ನೆಟ್‌ ಬಳಕೆದಾರರು 2022ರ ವೇಳೆಗೆ 85 ಕೋಟಿ ತಲುಪಬಹುದು ಎಂದು ಅಂದಾಜಿಸಲಾಗಿದೆ. 2017ರ ವರೆಗೂ 45 ಕೋಟಿ ಬಳಕೆದಾರಿದ್ದಾರೆ ಎಂದು ಪಿಡ್ಲುಸಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT