ಮಂಗಳವಾರ, ಮೇ 17, 2022
27 °C

ಫ್ಯಾನ್ಜಾರ್ಟ್ ಅಲ್ಟ್ರಾ-ಐಷಾರಾಮಿ ಚಿನ್ನದ ಬಣ್ಣದ ಫ್ಯಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಷಾರಾಮಿ ಫ್ಯಾನ್ ಗಳ ಪೈಕಿ ಭಾರತದ ಅಗ್ರಗಣ್ಯ ಸ್ಥಾನದಲ್ಲಿರುವ ಫ್ಯಾನ್ಜಾರ್ಟ್ ತಮ್ಮ ಅಲ್ಟ್ರಾ-ಐಷಾರಾಮಿ ಷಾಂಪೇನ್ ಗೋಲ್ಡ್ ಫ್ಯಾಂಡೆಲಿಯರ್ (ಫ್ಯಾನ್ ಮತ್ತು ಚಂಡೇಲಿಯರ್) ಯನ್ನು ತಮ್ಮ ಪೇಟೆಂಟ್ ಪಡೆದ ಹೆಚ್ಚಿನ ವೋರ್ಟೆಕ್ಸ್ ಬ್ಲೇಡ್‌ಗಳನ್ನು ಶುದ್ಧ ಬಂಗಾರದ ಬಣ್ಣದಿಂದ ತಯಾರಿಸಲಾಗಿದ್ದು, ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಷಾಂಪೇನ್ ಗೋಲ್ಡ್ ಫ್ಯಾಂಡೆಲಿಯರ್ ಬಿಡುಗಡೆ ಕುರಿತು ಮಾತನಾಡಿದ ಫ್ಯಾನ್ಜಾರ್ಟ್ ನ ಸ್ಥಾಪಕ ಮತ್ತು ಎಂಡಿ ಅನಿಲ್ ಲಾಲಾ, “ಷಾಂಪೇನ್ ಗೋಲ್ಡ್ ಫ್ಯಾನ್ ವಿವೇಚನಾಶೀಲರ ಅತ್ಯುತ್ತಮ ಆಯ್ಕೆಯಾಗಿರಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಮನೆಯಲ್ಲಿ ಹೆಚ್ಚು ಸಮಯ ಕಳೆಯುವುದು ಅನಿವಾರ್ಯವಾಗಿದೆ. ಫ್ಯಾಂಡೆಲಿಯರ್‌ಗಳ ಕ್ರಿಯಾತ್ಮಕ ಅಲಂಕಾರಿಕ ಅಂಶಗಳು ನಿಮ್ಮ ಮನೆಯ ಆಕರ್ಷಕ ನೋಟವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಷಾಂಪೇನ್ ಗೋಲ್ಡ್ ಫ್ಯಾಂಡೆಲಿಯರ್ ಅದರ ಪೇಟೆಂಟ್  ಹೊಂದಿರುವ ವೋರ್ಟೆಕ್ಸ್ ಬ್ಲೇಡ್‌ಗಳೊಂದಿಗೆ, ಸಂಪೂರ್ಣ ಕೊಠಡಿಯನ್ನು ತಂಪಾಗಿಸುತ್ತದೆ. ನಿಮಿಷಕ್ಕೆ ಅದು ನಿಮಿಷಕ್ಕೆ 8000 ಘನ ಅಡಿ (ಸಿಎಫ್‌ಎಂ) ಗಾಳಿಯನ್ನು ಹೊರ ಚಿಮ್ಮುತ್ತದೆ (ಹೊರಬಿಡುತ್ತದೆ) ಮತ್ತು ಬ್ರಷ್‌ಲೆಸ್ ಡಿಸಿ ಮೋಟಾರ್ (ಬಿಎಲ್‌ಡಿಸಿ ಮೋಟಾರ್) ನೊಂದಿಗೆ ಇದು ಲಭ್ಯವಿದೆ. ಬೇಸಿಗೆ-ಚಳಿಗಾಲಕ್ಕೆ ಸೂಕ್ತವಾಗುವ ಅನನ್ಯ ವೈಶಿಷ್ಟ್ಯವನ್ನು ಒಳಗೊಂಡಿರುವ ಇವುಗಳನ್ನು ಅಡಿಗೆ ಕೋಣೆಗಳಲ್ಲಿ ಚಳಿಗಾಲದಲ್ಲಿ ಗಾಳಿಯನ್ನು ವಿತರಿಸಲು ಬಳಸುವುದು ಹೆಚ್ಚು ಒಳ್ಳೆಯದು. ಫ್ಯಾನ್ ಕೇವಲ 22 ವ್ಯಾಟ್ ವಿದ್ಯುತ್ ಅನ್ನು ಬಳಸಿಕೊಳ್ಳುತ್ತದೆ” ಎಂದರು.

ಹಲವು ಆಂತರಿಕ ಮೂಡ್ ಬೋರ್ಡ್ ಗಳಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ:

ಈ 3-ಬ್ಲೇಡ್, ರಿಮೋಟ್ ಕಂಟ್ರೋಲ್ಡ್ ಫ್ಯಾನ್, ಲೈಟ್ ಕಿಟ್‌ನೊಂದಿಗೆ ಲಭ್ಯವಿದ್ದು ಅನೇಕ ಆಯ್ಕೆಗಳನ್ನು ಗ್ರಾಹಕರಿಗೆ ನೀಡುತ್ತದೆ. ರೀಗಲ್ ಷಾಂಪೇನ್ ಚಿನ್ನದ ಬಣ್ಣವು ಹಲವಾರು ಆಂತರಿಕ ಮೂಡ್ ಬೋರ್ಡ್ ಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. - ನಿಯೋ-ಕ್ಲಾಸಿಕ್, ಎಕ್ಲೆಕ್ಟಿಕ್, ಹಾಲಿವುಡ್ ಗ್ಲಾಮ್, ವಿಕ್ಟೋರಿಯನ್ ಮತ್ತು ಬೊಹೆಮಿಯನ್ ಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಫ್ಯಾಂಡಲಿಯರ್ ಫ್ಯಾನ್ಜಾರ್ಟ್ ವಿಶಿಷ್ಟ ಬೇಸಿಗೆ-ಚಳಿಗಾಲದ ವೈಶಿಷ್ಟ್ಯದೊಂದಿಗೆ ಬರುತ್ತದೆ - ಇದು ತಂಪಾದ ಗಾಳಿ ಮತ್ತು ತುಸು ಬೆಚ್ಚಗಿನ ಗಾಳಿಯನ್ನು ನೀಡಲು ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ (ಕ್ಲಾಕ್ ವೈಸ್, ಆಂಟಿ ಕ್ಲಾಕ್ ವೈಸ್) ಚಲಿಸುತ್ತದೆ. ಹಾಗಾಗಿ ಇದು ಊಟದ ಕೊಠಡಿಗೆ ಹೇಳಿ ಮಾಡಿಸಿದ ಫ್ಯಾನ್. ಇದನ್ನು ಮಲಗುವ ಕೋಣೆಗಳು, ಡ್ರಾಯಿಂಗ್ ಕೊಠಡಿ, ಹಾಲ್ ವಾಕ್-ಇನ್ ವಾರ್ಡ್ರೋಬ್‌ಗಳು ಮತ್ತು ಇತರ ಸ್ಥಳಗಳಲ್ಲಿ ಹಾಕಬಹುದು.

ಫ್ಯಾನ್‌ಜಾರ್ಟ್‌ನ ಷಾಂಪೇನ್ ಗೋಲ್ಡ್ ಫ್ಯಾಂಡೆಲಿಯರ್‌ನ ಬೆಲೆ 1.50 ಲಕ್ಷ ರೂ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು