ನವದೆಹಲಿ: ಏರ್ ಇಂಡಿಯಾ ಖಾಸಗೀಕರಣದ ವಿಚಾರದಲ್ಲಿ ಕೇಂದ್ರ ಸರ್ಕಾರವು ಹಣಕಾಸಿನ ಬಿಡ್ಗಳನ್ನು ಮುಂದಿನ ಕೆಲವು ದಿನಗಳಲ್ಲಿ ಆಹ್ವಾನಿಸಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

‘ಏರ್ ಇಂಡಿಯಾ ಕಂಪನಿಯನ್ನು ಖಾಸಗಿಯವರಿಗೆ ಮಾರಾಟ ಮಾಡಬೇಕು ಅಥವಾ ಕಂಪನಿಯನ್ನು ಮುಚ್ಚಬೇಕು. ಇವೆರಡನ್ನು ಹೊರತುಪಡಿಸಿದರೆ ಬೇರೆ ಆಯ್ಕೆ ಇಲ್ಲ’ ಎಂದೂ ಅವರು ಹೇಳಿದ್ದಾರೆ.

‘ಖಾಸಗಿಯವರು ಖರೀದಿ ಮಾಡುವವರೆಗೆ ಸರ್ಕಾರವೇ ಕಂಪನಿಯನ್ನು ನಡೆಸಿಕೊಂಡು ಹೋಗಬೇಕಿದೆ. ಬಿಡ್ಡರ್ಗಳಿಂದ ಹಣಕಾಸಿನ ಬಿಡ್ ಬಂದ ನಂತರ, ನಾವು ಕಂಪನಿಯನ್ನು ಖಾಸಗಿಯವರಿಗೆ ಹಸ್ತಾಂತರ ಮಾಡುವುದಷ್ಟೇ ಬಾಕಿ ಉಳಿಯಲಿದೆ’ ಎಂದು ಅವರು ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದಾರೆ.

‘ಏರ್ ಇಂಡಿಯಾದ ನಿರ್ವಹಣೆ ಸರಿಯಾಗಿ ಇಲ್ಲದಿದ್ದ ಕಾರಣ ಒಟ್ಟು ಸಾಲದ ಮೊತ್ತವು ₹ 60 ಸಾವಿರ ಕೋಟಿ ಆಗಿದೆ. ನಾವು ಪ್ರತಿದಿನ ₹ 20 ಕೋಟಿ ನಷ್ಟ ಅನುಭವಿಸುತ್ತಿದ್ದೇವೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಹೋಗಿ ಹಣ ಕೊಡಿ ಎಂದು ಕೇಳುವ ಶಕ್ತಿ ನನಗಿಲ್ಲ’ ಎಂದು ಪುರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.