ತಿಂಗಳ ಅಂತ್ಯಕ್ಕೆ ‘ಪಿಎಸ್‌ಬಿ’ಗೆ ಬಂಡವಾಳ ನೆರವು ನಿರೀಕ್ಷೆ

7

ತಿಂಗಳ ಅಂತ್ಯಕ್ಕೆ ‘ಪಿಎಸ್‌ಬಿ’ಗೆ ಬಂಡವಾಳ ನೆರವು ನಿರೀಕ್ಷೆ

Published:
Updated:

ನವದೆಹಲಿ: ಹಣಕಾಸು ಸಚಿವಾಲಯ ತಿಂಗಳ ಅಂತ್ಯದ ವೇಳೆಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ (ಪಿಎಸ್‌ಬಿ) ಎರಡನೇ ಹಂತದ ಬಂಡವಾಳ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಅಂದಾಜು ₹ 53 ಸಾವಿರ ಕೋಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿವೆ. ಈ ವರ್ಷದಲ್ಲಿ ಈಗಾಗಲೇ ಐದು ಬ್ಯಾಂಕ್‌ಗಳಿಗೆ ₹11,336 ಕೋಟಿ ನೀಡಿದೆ.

ಬ್ಯಾಂಕ್‌ಗಳ ಎರಡನೇ ತ್ರೈಮಾಸಿಕ ಫಲಿತಾಂಶದ ಆಧಾರದ ಮೇಲೆ ಬಂಡವಾಳ ನೀಡಲಿದೆ. ಸಾಲ ನೀಡಿಕೆ ಹೆಚ್ಚಿಸಲು, ಮುಖ್ಯವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (ಎಂಎಸ್‌ಎಂಇ) ಸಾಲ ನೀಡಲು ಅನುಕೂಲವಾಗುವಂತೆ ಬ್ಯಾಂಕ್‌ಗಳು ಕೇಂದ್ರದಿಂದ ನೆರವು ಪಡೆಯಲಿವೆ ಎಂದು ತಿಳಿಸಿವೆ.

ಎರಡನೇ ತ್ರೈಮಾಸಿಕದಲ್ಲಿ ಒಂದು ಅಥವಾ ಎರಡು ಬ್ಯಾಂಕ್‌ಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಬೇಕಿದೆ. ಅದಾದ ಬಳಿಕ ಸಚಿವಾಲಯವು ಬ್ಯಾಂಕ್‌ಗಳೊಂದಿಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿವೆ.

ವಸೂಲಾಗದ ಸಾಲದ (ಎನ್‌ಪಿಎ) ಸುಳಿಯಲ್ಲಿ ಸಿಲುಕಿರುವ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಕೇಂದ್ರ ಸರ್ಕಾರ ₹ 2.11 ಲಕ್ಷ ಕೋಟಿ ಬಂಡವಾಳ ಮರುಭರ್ತಿ ಕ್ರಮ ಕೈಗೊಂಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !