ಫ್ಲಿಪ್‌ಕಾರ್ಟ್ ದೇಶದ 9 ನಗರಗಳಲ್ಲಿ ಇನ್ನೂ 11 ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಆರಂಭಿಸಿದೆ. ಈ ಮೂಲಕ ಫ್ಲಿಪ್‌ಕಾರ್ಟ್ ದೇಶಾದ್ಯಂತ ಒಟ್ಟು 83 ಫುಲ್ ಫಿಲ್ಮೆಂಟ್ ಕೇಂದ್ರಗಳನ್ನು ಹೊಂದಿದಂತಾಗಿದೆ. ತನ್ನ ಸಾಮಾಜಿಕ-ಆರ್ಥಿಕಾಭಿವೃದ್ಧಿ ಬದ್ಧತೆಯೊಂದಿಗೆ ಫ್ಲಿಪ್‌ಕಾರ್ಟ್ ದೇಶದೆಲ್ಲೆಡೆ ತನ್ನ ಪೂರೈಕೆ ಸರಪಳಿಯೊಳಗೆ 40ಕ್ಕೂ ಪ್ರದೇಶಗಳಲ್ಲಿ 1 ಲಕ್ಷಕ್ಕೂ ಅಧಿಕ ಹೊಸ ಉದ್ಯೋಗ ಸೃಷ್ಟಿ ಮಾಡುವತ್ತ ಗಮನಹರಿಸಿದೆ. ಇದು ಈ ವರ್ಷದ ಹಬ್ಬದ ಋತುವಿನಲ್ಲಿ ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವ ಮೂಲಕ ಫ್ಲಿಪ್‌ಕಾರ್ಟ್‌ನ ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಇನ್ವೆಂಟರಿ ಮ್ಯಾನೇಜರ್‌ಗಳು, ಲಾಜಿಸ್ಟಿಕ್ ಅಸೋಸಿಯೇಟ್ಸ್, ಕಿರಾಣಿ ಪಾಲುದಾರರು ಮತ್ತು ವಿತರಣೆಗಾರರು ಸೇರಿದಂತೆ ವಿವಿಧ ಪೂರೈಕೆ ಸರಪಳಿಗಾರರನ್ನು ಸದೃಢಗೊಳಿಸಲಾಗುತ್ತದೆ.