ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ಲಿಪ್‌ಕಾರ್ಟ್ ಮೂಲಕ ಪ್ರಮುಖ ಬ್ರಾಂಡ್‌ಗಳ ದ್ವಿಚಕ್ರ ವಾಹನಗಳ ಮಾರಾಟ

Published : 24 ಸೆಪ್ಟೆಂಬರ್ 2024, 12:54 IST
Last Updated : 24 ಸೆಪ್ಟೆಂಬರ್ 2024, 12:54 IST
ಫಾಲೋ ಮಾಡಿ
Comments

ಬೆಂಗಳೂರು: ಪ್ರಮುಖ ಬ್ರಾಂಡ್‌ಗಳ ದ್ವಿಚಕ್ರವಾಹನಗಳ ಮಾರಾಟಕ್ಕೆ ಆನ್‌ಲೈನ್‌ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ ವೇದಿಕೆ ಕಲ್ಪಿಸಿದೆ.

ಹೀರೊ, ಬಜಾಜ್, ಟಿವಿಎಸ್, ಒಲಾ, ಚೇತಕ್, ಜಾವಾ, ಎಜ್ಡಿ, ವಿಡಾ, ಏಥರ್‌ ಸೇರಿದಂತೆ ಬಹಳಷ್ಟು ಪ್ರಮುಖ ದ್ವಿಚಕ್ರ ವಾಹನ ಬ್ರಾಂಡ್‌ಗಳ ಮಾರಾಟಕ್ಕೆ ಫ್ಲಿಪ್‌ಕಾರ್ಟ್‌ ಸಿದ್ಧತೆ ನಡೆಸಿದೆ. ಈ ಬಾರಿಯ ಹಬ್ಬದ ಋತುವಿವನಲ್ಲಿ ಗ್ರಾಹಕರಿಗೆ ನೆರವಾಗುವ ಉದ್ದೇಶದೊಂದಿಗೆ ದೇಶದ 700 ನಗರಗಳ 12 ಸಾವಿರಕ್ಕೂ ಹೆಚ್ಚು ಪಿನ್‌ಕೋಡ್‌ಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಈ ವಾಹನಗಳ ಪೂರೈಕೆ ನಡೆಯಲಿದೆ ಎಂದು ಫ್ಲಿಪ್‌ಕಾರ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಾಹನ ಖರೀದಿಸುವ ಗ್ರಾಹಕರಿಗೆ ಹಣಕಾಸು ಸೌಲಭ್ಯಕ್ಕಾಗಿ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ 5ರಷ್ಟು ರಿಯಾಯ್ತಿ ಸೌಲಭ್ಯವೂ ಇದೆ. ಖರೀದಿ ನಂತರ ಸೂಪರ್ ಕಾಯಿನ್‌ಗಳ ಮೂಲಕ ಲಾಯಲ್ಟಿ ಪ್ರಯೋಜಗಳನ್ನೂ ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ವಿಭಾಗದ ಉಪಾಧ್ಯಕ್ಷ ಜಗಜೀತ್ ಹಾರೊಡೆ ಅವರು ಈ ಕುರಿತು ಮಾಹಿತಿ ನೀಡಿ, ‘ನಗರ ಪ್ರದೇಶ ಮಾತ್ರವಲ್ಲದೇ ಪಟ್ಟಣ ಪ್ರದೇಶಗಳ ಗ್ರಾಹಕರೂ ತಮ್ಮಿಷ್ಟದ ದ್ವಿಚಕ್ರವಾಹನವನ್ನು ತಮ್ಮ ಮನೆ ಬಾಗಿಲ ಬಳಿಯೇ ಪಡೆಯಬಹುದಾಗಿದೆ. ಕೈಗೆಟುಕುವ ಬೆಲೆ, ನಂಬಿಕೆ ಮತ್ತು ವ್ಯಾಪಕ ಶ್ರೇಣಿಯ ಆಯ್ಕೆಯೂ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT