ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಕಾಮರ್ಸ್‌ | ಅಗ್ರಸ್ಥಾನಕ್ಕೇರಿದ ಫ್ಲಿಪ್‌ಕಾರ್ಟ್‌

Published 26 ಜನವರಿ 2024, 16:03 IST
Last Updated 26 ಜನವರಿ 2024, 16:03 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಇ–ಕಾಮರ್ಸ್‌ ವಲಯದಲ್ಲಿ ವಾಲ್‌ಮಾರ್ಟ್‌ ಸಮೂಹದ ಫ್ಲಿಪ್‌ಕಾರ್ಟ್‌ ಶೇ 48ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಅಗ್ರಸ್ಥಾನಕ್ಕೇರಿದೆ ಎಂದು ಆಸ್ತಿ ನಿರ್ವಹಣಾ ಸಂಸ್ಥೆ ಅಲಯನ್ಸ್ ಬರ್ನ್‌ಸ್ಟೈನ್ ವರದಿ ತಿಳಿಸಿದೆ.

ದೇಶದಲ್ಲಿ ಮಿಶೋ ವೇಗವಾಗಿ ಬೆಳೆಯುತ್ತಿರುವ ಇ–ಕಾಮರ್ಸ್‌ ವೇದಿಕೆಯಾಗಿ ಹೊರಹೊಮ್ಮಿದ್ದು, 12 ಕೋಟಿ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ವರ್ಷದಿಂದ ವರ್ಷಕ್ಕೆ ಫ್ಲಿಪ್‌ಕಾರ್ಟ್‌ ಮತ್ತು ಮಿಶೋ ಬಳಕೆದಾರರ ಸಂಖ್ಯೆ ಕ್ರಮವಾಗಿ ಶೇ 21 ಮತ್ತು ಶೇ 32ರಷ್ಟು ಹೆಚ್ಚಳವಾಗಿದೆ. ಆದರೆ ಪ್ರತಿಸ್ಪರ್ಧಿ ಕಂಪನಿಗಳಿಗೆ ಹೋಲಿಸಿದರೆ, ಕಡಿಮೆ ಕೊಡುಗೆಯಿಂದಾಗಿ ಅಮೆಜಾನ್‌ ಬಳಕೆದಾರರ ಬೆಳವಣಿಗೆಯಲ್ಲಿ ಶೇ 13ರಷ್ಟು ಇಳಿಕೆಯಾಗಿದೆ.

2023–24ನೇ ಹಣಕಾಸು ವರ್ಷದಲ್ಲಿ ಫ್ಲಿಪ್‌ಕಾರ್ಟ್‌ ಮೊಬೈಲ್‌ ಮಾರಾಟದಲ್ಲಿ ಶೇ 50 ಮತ್ತು ಉಡುಪು ಮಾರಾಟದಲ್ಲಿ ಶೇ 30ರಷ್ಟು ಪಾಲು ಹೊಂದಿದೆ. ಆನ್‌ಲೈನ್‌ ಸ್ಮಾರ್ಟ್‌ಫೋನ್‌ ಮತ್ತು ಆನ್‌ಲೈನ್‌ ಫ್ಯಾಷನ್‌ ಮಾರುಕಟ್ಟೆಯಲ್ಲಿ ಕ್ರಮವಾಗಿ ಶೇ 48 ಮತ್ತು ಶೇ 60ರಷ್ಟು ಮಾರುಕಟ್ಟೆ ಷೇರು ಹೊಂದಿದೆ ಎಂದು ವರದಿ ತಿಳಿಸಿದೆ.

ಕಳೆದ ಒಂದು ವರ್ಷದಲ್ಲಿ ಮಿಶೋ ಆರ್ಡರ್‌ ಪ್ರಮಾಣವು ಶೇ 43ರಷ್ಟು ಬೆಳವಣಿಗೆಯಾಗಿದ್ದು, ವರಮಾನವು ಶೇ 54ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT