ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರದಿಂದ ನಾಲ್ಕು ಐಪಿಒ

Last Updated 3 ಆಗಸ್ಟ್ 2021, 16:48 IST
ಅಕ್ಷರ ಗಾತ್ರ

ಬೆಂಗಳೂರು: ನಾಲ್ಕು ಕಂಪನಿಗಳು ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ (ಐಪಿಒ) ಪ್ರಕ್ರಿಯೆಯನ್ನು ಬುಧವಾರದಿಂದ (ಆ. 4) ಆರಂಭಿಸಲಿವೆ. ಒಂದೇ ದಿನ ನಾಲ್ಕು ಕಂಪನಿಗಳ ಐಪಿಒಗಳು ಶುರುವಾಗುತ್ತಿರುವುದು ಈಚಿನ ದಿನಗಳಲ್ಲಿ ಇದೇ ಮೊದಲು.

ವಿಂಡ್ಲಾಸ್ ಬಯೋಟೆಕ್ ಲಿಮಿಟೆಡ್, ದೇವಯಾನಿ ಇಂಟರ್‌ನ್ಯಾಷನಲ್ ಲಿಮಿಟೆಡ್, ಕೃಷ್ಣಾ ಡಯಾಗ್ನಾಸ್ಟಿಕ್ಸ್ ಲಿಮಿಟೆಡ್ ಮತ್ತು ಎಕ್ಸಾರೊ ಟೈಲ್ಸ್ ಲಿಮಿಟೆಡ್ ಕಂಪನಿಗಳು ಬುಧವಾರ ತಮ್ಮ ಐಪಿಒ ಆರಂಭಿಸಲಿವೆ. ಈ ಕಂಪನಿಗಳ ಷೇರುಗಳನ್ನು ಖರೀದಿಸಲು ಅರ್ಜಿ ಸಲ್ಲಿಸಲು ಶುಕ್ರವಾರದವರೆಗೆ ಅವಕಾಶ ಇರಲಿದೆ.

ಜುಲೈ ತಿಂಗಳಿನಲ್ಲಿ ಐಪಿಒ ಮೂಲಕ ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ನೀಡಿದ ಕಂಪನಿಗಳು, ಷೇರು ಮಾರುಕಟ್ಟೆ ಪ್ರವೇಶದ ದಿನ ಹೂಡಿಕೆದಾರರಿಗೆ ಗರಿಷ್ಠ ಶೇ 113ರಷ್ಟು ಲಾಭ ತಂದುಕೊಟ್ಟಿವೆ. ಐಪಿಒ ನಡೆಸಿ, ಜುಲೈನಲ್ಲಿ ಷೇರು ಮಾರುಕಟ್ಟೆ ಪ್ರವೇಶಿಸಿದ ಜೊಮ್ಯಾಟೊ ಶೇ 64ರಷ್ಟು, ತತ್ವ ಚಿಂತನ ಫಾರ್ಮಾ ಕೆಮ್‌ ಲಿಮಿಟೆಡ್ ಶೇ 113ರಷ್ಟು, ಜಿ.ಆರ್. ಇನ್‌ಫ್ರಾಪ್ರೊಜೆಕ್ಟ್ಸ್‌ ಲಿಮಿಟೆಡ್ ಶೇ 107ರಷ್ಟು, ಕ್ಲೀನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಲಿಮಿಟೆಡ್‌ ಶೇ 75ರಷ್ಟು ಲಾಭವನ್ನು ಷೇರು ಮಾರುಕಟ್ಟೆ ಪ್ರವೇಶದ ದಿನವೇ ಹೂಡಿಕೆದಾರರಿಗೆ ತಂದುಕೊಟ್ಟಿವೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT