ನವದೆಹಲಿ: ನಾಲ್ಕು ಕಂಪನಿಗಳು ಮುಂದಿನ ವಾರ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ₹6,600 ಕೋಟಿ ಬಂಡವಾಳ ಸಂಗ್ರಹಕ್ಕೆ ಮುಂದಾಗಿವೆ.

ಲೀಲಾ ಪ್ಯಾಲೆಸಸ್ ಹೋಟೆಲ್ಸ್ ಆ್ಯಂಡ್ ರೆಸಾರ್ಟ್ಸ್ನ ಬ್ರ್ಯಾಂಡ್ ಆದ ಸ್ಕ್ಲಾಸ್ ಬೆಂಗಳೂರು ಲಿಮಿಟೆಡ್, ಏಜಿಸ್ ವೊಪಾಕ್ ಟರ್ಮಿನಲ್ಸ್, ಪ್ರೊಸ್ಟಾರ್ಮ್ ಇನ್ಫೊ ಸಿಸ್ಟಮ್ಸ್ ಮತ್ತು ಸ್ಕೋಡಾ ಟ್ಯೂಬ್ಸ್ ಕಂಪನಿಯು ಬಂಡವಾಳ ಸಂಗ್ರಹಿಸಲಿದೆ.

ಪ್ರಸಕ್ತ ವರ್ಷದ ಆರಂಭದಿಂದ ಇಲ್ಲಿಯವರೆಗೆ 12 ಕಂಪನಿಗಳು ಐಪಿಒ ಮೂಲಕ ಬಂಡವಾಳ ಸಂಗ್ರಹಿಸಿವೆ. ಕಳೆದ ವರ್ಷ 91 ಕಂಪನಿಗಳು ₹1.6 ಲಕ್ಷ ಕೋಟಿ ಸಂಗ್ರಹಿಸಿದ್ದವು.

ಈ ಬಾರಿ ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ತಲೆದೋರಿರುವ ಅನಿಶ್ಚಿತತೆಯಿಂದಾಗಿ ಷೇರು ಮಾರುಕಟ್ಟೆಯಲ್ಲಿ ಚಂಚಲತೆ ಉಂಟಾಗಿದೆ. ಇದು ಐಪಿಒಗಳ ಸಂಖ್ಯೆ ಇಳಿಕೆಗೆ ಕಾರಣವಾಗಿದೆ. ಆದರೂ, ಮಾರುಕಟ್ಟೆ ಸ್ಥಿರವಾಗಿರುವುದರಿಂದ, ಹೆಚ್ಚು ಐಪಿಒಗಳು ದಾಖಲಾಗುತ್ತಿವೆ ಎಂದು ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.