ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ ಹೊರಹರಿವು ಅಬಾಧಿತ

ಅಮೆರಿಕದ ಬಾಂಡ್‌ ಖರೀದಿಗೆ ಹೆಚ್ಚು ಹಣ ಹಾಕುತ್ತಿರುವ ಎಫ್‌ಪಿಐ
Published 4 ನವೆಂಬರ್ 2023, 15:50 IST
Last Updated 4 ನವೆಂಬರ್ 2023, 15:50 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ನವೆಂಬರ್‌ನಲ್ಲಿಯೂ ಭಾರತದಿಂದ ಬಂಡವಾಳ ಹಿಂತೆಗೆತ ಮುಂದುವರಿಸಿದ್ದಾರೆ.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ನವೆಂಬರ್ 1ರಿಂದ 3ರವರೆಗೆ ನಡೆದಿರುವ ವಹಿವಾಟಿನಲ್ಲಿ ₹3,090 ಕೋಟಿ ಮೌಲ್ಯದ ಷೇರುಗಳನ್ನು ಎಫ್‌ಪಿಐ ಮಾರಾಟ ಮಾಡಿದ್ದಾರೆ. ಇದಕ್ಕೂ ಹಿಂದೆ ಸೆಪ್ಟೆಂಬರ್‌ನಲ್ಲಿ ₹14,767 ಕೋಟಿ ಮತ್ತು ಅಕ್ಟೋಬರ್‌ನಲ್ಲಿ ₹20,300 ಕೋಟಿ ಬಂಡವಾಳವನ್ನು ಹಿಂದಕ್ಕೆ ಪಡೆದಿದ್ದಾರೆ.

‘ಎಫ್‌ಐಐ ಮಾರಾಟವು ಮುಂದಿನ ದಿನಗಳಲ್ಲಿ ಕಡಿಮೆ ಆಗಬಹುದು. ಭಾರತದ ಮಾರುಕಟ್ಟೆಗಳಲ್ಲಿ ಆಗಲಿರುವ ಏರಿಕೆಯ  ಲಾಭ ಪಡೆದುಕೊಳ್ಳಲು ಹೂಡಿಕೆಯನ್ನೂ ಮಾಡುವ ಸಾಧ್ಯತೆ ಇದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಚೇತರಿಕೆ ಸೂಚನೆ: ಗುರುವಾರ ಮತ್ತು ಶುಕ್ರವಾರ ನಡೆದ ವಹಿವಾಟಿನಿಂದಾಗಿ ಷೇರುಪೇಟೆಗಳು ಮತ್ತೆ ಚೇತರಿಕೆ ಕಂಡುಕೊಳ್ಳುವ ಸೂಚನೆ ದೊರೆತಿದೆ. ಇನ್ನಷ್ಟು ಬಡ್ಡಿದರ ಹೆಚ್ಚಳ ಇಲ್ಲ ಎನ್ನುವ ಸುಳಿವನ್ನು ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್ ನೀಡಿದೆ. ಇದು ಭಾರತವನ್ನೂ ಒಳಗೊಂಡು ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಅಮೆರಿಕದ 10 ವರ್ಷಗಳ ಬಾಂಡ್ ಮೇಲಿನ ಗಳಿಕೆ ಪ್ರಮಾಣವು ಕಡಿಮೆ ಆಗುತ್ತಿದೆ. ಏಜೆನ್ಸಿಗಳಲ್ಲಿ ಇರುವ ಮಾಹಿತಿಯ ಪ್ರಕಾರ, ಅಕ್ಟೋಬರ್ 19ರಂದು ಶೇ 5ರ ಗರಿಷ್ಠ ಮಟ್ಟದಲ್ಲಿ ಇದ್ದ ಬಾಂಡ್‌ ದರವು, ನವೆಂಬರ್‌ 3ರಂದು ಶೇ 4.66ಕ್ಕೆ ಇಳಿಕೆ ಕಂಡಿದೆ. 

ಬ್ಯಾಂಕಿಂಗ್‌, ಹಣಕಾಸು ವಲಯಗಳಲ್ಲಿ ಹೂಡಿಕೆ ಹೆಚ್ಚುವ ಸಂಭವ ದೇಶಿ ಷೇರುಪೇಟೆಗೆ ವಿದೇಶಿ ಹೂಡಿಕೆ ಮರಳುವ ನಿರೀಕ್ಷೆ

ವಿದೇಶಿ ಬಂಡವಾಳ ಹಿಂತೆಗೆತ (ಕೋಟಿಗಳಲ್ಲಿ)

ಅ.30;₹1762

ಅ.31;₹696

ನ.1;₹1817

ನ.2;₹1261

ನ.3;₹12

ಮಾಹಿತಿ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT