ಎಫ್‌ಪಿಐ ಹೂಡಿಕೆ ₹ 5,156 ಕೋಟಿ

ನವದೆಹಲಿ: ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಜನವರಿ 1ರಿಂದ 8ರವರೆಗೆ ₹ 5,156 ಕೋಟಿ ಹೂಡಿಕೆ ಮಾಡಿದ್ದಾರೆ. ಒಟ್ಟಾರೆ ಹೂಡಿಕೆಯಲ್ಲಿ ಷೇರುಗಳ ಖರೀದಿಗೆ ₹ 4,819 ಕೋಟಿ ಹಾಗೂ ಸಾಲಪತ್ರಗಳ ಖರೀದಿಗೆ ₹ 337 ಕೋಟಿ ತೊಡಗಿಸಿದ್ದಾರೆ.
ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಉತ್ತಮವಾಗಿರುವ ನಿರೀಕ್ಷೆ ಹಾಗೂ ಬಜೆಟ್‌ನಲ್ಲಿ ಸುಧಾರಣಾ ಕ್ರಮಗಳು ಜಾರಿಯಾಗುವ ಸಾಧ್ಯತೆಯಿಂದಾಗಿ ಈ ಪ್ರಮಾಣದಲ್ಲಿ ಹೂಡಿಕೆ ಆಗಿದೆ.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಭಾರತಕ್ಕೆ ಬಂಡವಾಳ ಒಳಹರಿವು ಹೆಚ್ಚಾಗಲು ಇದು ಪ್ರಮುಖ ಕಾರಣ ಎಂದು ಗ್ರೋವ್ ಸಂಸ್ಥೆಯ ಸಹ ಸ್ಥಾಪಕ ಹರ್ಷ್ ಜೈನ್ ತಿಳಿಸಿದ್ದಾರೆ.
2020ರಲ್ಲಿ ಭಾರತದಲ್ಲಿ ಆಗಿರುವ ವಿದೇಶಿ ಬಂಡವಾಳ ಹೂಡಿಕೆಯು ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಪೈಕಿ ಆಗಿರುವ ಗರಿಷ್ಠ ಪ್ರಮಾಣದ ಹೂಡಿಕೆ. ಪ್ರವರ್ಧಮಾನಕ್ಕೆ ಬರುತ್ತಿರುವ ಬಹುತೇಕ ದೇಶಗಳಿಂದ ಎಫ್‌ಪಿಐ ಹೊರಹರಿವು ಕಂಡುಬಂದಿದೆ ಎಂದೂ ಜೈನ್ ಹೇಳಿದ್ದಾರೆ.
ಭಾರತ, ಚೀನಾ, ರಷ್ಯಾ ಮತ್ತು ದಕ್ಷಿಣ ಕೊರಿಯಾ ದೇಶಗಳು ಎಫ್‌ಪಿಐಗೆ ಪ್ರಮುಖ ತಾಣಗಳಾಗಿವೆ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯ್ ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.