ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ವಿತರಣೆ: ₹ 1.78 ಲಕ್ಷ ಕೋಟಿ ಬಂಡವಾಳ ಸಂಗ್ರಹ

2017ರ ಬಳಿಕ ಕಂಪನಿಗಳಿಂದ ದಾಖಲೆ ಪ್ರಮಾಣದ ಬಂಡವಾಳ ಸಂಗ್ರಹ
Last Updated 28 ಡಿಸೆಂಬರ್ 2020, 10:18 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌–19 ಸಾಂಕ್ರಾಮಿಕದ ಬಿಕ್ಕಟ್ಟಿನ ನಡುವೆಯೂ ಕಂಪನಿಗಳು 2020ರಲ್ಲಿ ಷೇರುಮಾರುಕಟ್ಟೆಯಿಂದ ದಾಖಲೆ ಪ್ರಮಾಣದಲ್ಲಿ ಬಂಡವಾಳ ಸಂಗ್ರಹಿಸಿವೆ.

‘ಐಪಿಒ, ಒಎಸ್‌ಎಸ್‌ ಮತ್ತು ಇತರೆ ಮಾರ್ಗಗಳ ಮೂಲಕ ಷೇರುಗಳನ್ನು ಮಾರಾಟ ಮಾಡಿ ₹1.78 ಲಕ್ಷ ಕೋಟಿ ಬಂಡವಾಳ ಸಂಗ್ರಹ ಮಾಡಿವೆ. 2019ರಲ್ಲಿ ₹ 82,241 ಕೋಟಿ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ 2020ರಲ್ಲಿ ಆಗಿರುವ ಬಂಡವಾಳ ಸಂಗ್ರಹದ ಪ್ರಮಾಣ ಶೇ 116ರಷ್ಟಾಗಿದೆ’ ಎಂದು ಪ್ರೈಮ್‌ ಡೇಟಾಬೇಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಣವ್‌ ಹಲ್ದಿಯಾ ಮಾಹಿತಿ ನೀಡಿದ್ದಾರೆ.

ಬಾಂಡ್‌ ನೀಡಿಕೆ ಮೂಲಕ ಸಂಗ್ರಹಿಸಿರುವ ₹ 7,485 ಕೋಟಿಯನ್ನೂ ಸೇರಿಸಿದರೆ ಒಟ್ಟಾರೆ ಬಂಡವಾಳ ಸಂಗ್ರಹ ₹ 1.84 ಲಕ್ಷ ಕೋಟಿಗಳಿಗೆ ತಲುಪಲಿದೆ. ಈ ಹಿಂದೆ 2017ರಲ್ಲಿ ಕಂಪನಿಗಳು ಷೇರುಗಳನ್ನು ಮಾರಾಟ ಮಾಡುವ ಮೂಲಕ ₹ 1.60 ಲಕ್ಷ ಕೋಟಿಗಳಷ್ಟು ಮೊತ್ತ ಸಂಗ್ರಹಿಸಿದ್ದವು.

‘ಐಪಿಒದಲ್ಲಿ ರಿಟೇಲ್‌ ಹೂಡಿಕೆದಾರರ ಭಾಗವಹಿಸುವಿಕೆ ಹೆಚ್ಚಾಗಿದೆ. ಕ್ಯುಐಪಿ ಮತ್ತು ರಿಯಲ್‌ ಎಸ್ಟೇಟ್‌ ಇನ್‌ವೆಸ್ಟ್‌ಮೆಂಟ್‌ ಟ್ರಸ್ಟ್‌ಗಳ ಮೂಲಕ ಅಧಿಕ ಮೊತ್ತ ಸಂಗ್ರಹವಾಗಿದೆ. ಈ ಕಾರಣಗಳಿಂದಾಗಿಯೇ ಒಟ್ಟಾರೆಯಾಗಿ ಬಂಡವಾಳ ಸಂಗ್ರಹ ಗರಿಷ್ಠ ಮಟ್ಟಕ್ಕೆ ತಲುಪಿದೆ’ ಎಂದು ಅವರು ತಿಳಿಸಿದ್ದಾರೆ.

2020ರಲ್ಲಿ ಪ್ರಮುಖ 15 ಐಪಿಒಗಳ ₹ 26,611 ಕೋಟಿ ಸಂಗ್ರಹಿಸಿವೆ. 2019ರಲ್ಲಿ 16 ಐಪಿಒಗಳು ₹ 12,362 ಕೋಟಿ ಸಂಗ್ರಹಿಸಿದ್ದವು ಇದಕ್ಕೆ ಹೋಲಿಸಿದರೆ ಶೇ 115ರಷ್ಟು ಏರಿಕೆ ಕಂಡಿದೆ.2020ರಲ್ಲಿ ಎಸ್‌ಬಿಐ ಕಾರ್ಡ್‌ ಅತಿದೊಡ್ಡ ಐಪಿಒ ಆಗಿದ್ದು, ₹ 10,341 ಕೋಟಿ ಸಂಗ್ರಹವಾಗಿದೆ.

2017ರಲ್ಲಿ 24 ಐಪಿಒಗಳ ಮೂಲಕ ₹ 30,959 ಕೋಟಿ ಹಾಗೂ 2016ರಲ್ಲಿ 36 ಐಪಿಒಗಳ ಮೂಲಕ ₹ 67,147 ಕೋಟಿ ಸಂಗ್ರಹ ಆಗಿತ್ತು.

ಬಂಡವಾಳ ಸಂಗ್ರಹ ವಿವರ (ಕೋಟಿಗಳಲ್ಲಿ)

ಐಪಿಒ; ₹ 26,770

ಎಫ್‌ಪಿಒ; ₹ 15,024

ಒಎಫ್‌ಎಸ್‌; ₹ 21,458

ಕ್ಯುಐಪಿ; ₹ 84,501

ಆರ್‌ಇಐಟಿ; ₹ 29,715

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT