ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಲ್ಲಿ ರತ್ನ, ಆಭರಣ ರಫ್ತು ಶೇ 20ರಷ್ಟು ಹೆಚ್ಚಳ

Last Updated 18 ಜೂನ್ 2022, 13:59 IST
ಅಕ್ಷರ ಗಾತ್ರ

ಮುಂಬೈ: ರತ್ನ ಮತ್ತು ಆಭರಣ ರಫ್ತು ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಮೇನಲ್ಲಿ ಶೇ 20ರಷ್ಟು ಹೆಚ್ಚಾಗಿದೆ ಎಂದು ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಶನಿವಾರ ಹೇಳಿದೆ.

2021ರ ಮೇನಲ್ಲಿ ₹ 21,156 ಕೋಟಿ ಮೌಲ್ಯದ ರತ್ನ ಮತ್ತು ಆಭರಣ ರಫ್ತಾಗಿತ್ತು. 2022ರ ಮೇನಲ್ಲಿ ₹ 25,365 ಕೋಟಿಗೆ ಏರಿಕೆ ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅಮೆರಿಕ, ಹಾಂಕಾಂಗ್‌, ಯುಎಇ, ಬೆಲ್ಜಿಯಂ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಂದ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರಫ್ತು ವಹಿವಾಟಿನಲ್ಲಿ ಏರಿಕೆ ಆಗಿದೆ ಎಂದು ಅದು ಹೇಳಿದೆ.

2022–23ರಲ್ಲಿ ₹ 3.54 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಡೆಸುವ ಗುರಿಯನ್ನು ಸರ್ಕಾರ ಹೊಂದಿದೆ. ಯುಎಇ ಮತ್ತು ಆಸ್ಟ್ರೇಲಿಯಾದ ಜೊತೆಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂವು ಈ ಗುರಿ ತಲುಪಲು ನೆರವಾಗುವ ವಿಶ್ವಾಸ ಇದೆ ಎಂದು ಮಂಡಳಿಯ ಅಧ್ಯಕ್ಷ ಕೋಲಿನ್‌ ಶಾ ಹೇಳಿದ್ದಾರೆ.

ಚಿನ್ನಾಭರಣಗಳ ರಫ್ತು ಶೇ 50ರಷ್ಟು ಹೆಚ್ಚಾಗಿ ₹ 5,273ಕ್ಕೆ ತಲುಪಿದೆ. 2021ರ ಮೇನಲ್ಲಿ ₹ 3,513 ಕೋಟಿ ಮೌಲ್ಯದ ಚಿನ್ನಾಭರಣ ರಫ್ತಾಗಿತ್ತು. ಬೆಳ್ಳಿ ಆಭರಣಗಳ ರಫ್ತು ₹ 3,993 ಕೋಟಿಯಿಂದ ₹ 3,728 ಕೋಟಿಗೆ ಶೇ 6.63ರಷ್ಟು ಇಳಿಕೆ ಆಗಿದೆ.

ಪ್ರಮುಖ ದೇಶಗಳಿಗೆ ರಫ್ತು (ಕೋಟಿಗಳಲ್ಲಿ)

ಅಮೆರಿಕ- ₹ 19,995

ಹಾಂಕಾಂಗ್‌-₹ 10,695

ಯುಎಇ- ₹ 6,277

ಬೆಲ್ಜಿಯಂ- ₹ 3,417

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT