ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಂಎಫ್‌ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾಗೆ ಮುಂಬಡ್ತಿ

Last Updated 3 ಡಿಸೆಂಬರ್ 2021, 13:50 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಅವರಿಗೆ ಸಂಸ್ಥೆಯ ‘ಒಂದನೆಯ ಸಹಾಯಕ ವ್ಯವಸ್ಥಾಪಕ ನಿರ್ದೇಶಕಿ’ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ಇದು ಐಎಂಎಫ್‌ನ ಎರಡನೆಯ ಅತಿದೊಡ್ಡಹುದ್ದೆ.

ಈಗ ಈ ಹುದ್ದೆಯಲ್ಲಿ ಇರುವ ಜೆಫ್ರಿ ಒಕಮೊಟೊ ಅವರು ಮುಂದಿನ ವರ್ಷದ ಆರಂಭದಲ್ಲಿ ಹುದ್ದೆ ತೊರೆಯಲಿದ್ದಾರೆ ಎಂದು ಐಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲೀನಾ ಜಾರ್ಜೀವಾ ತಿಳಿಸಿದ್ದಾರೆ.

ಭಾರತ ಮೂಲದ ಗೀತಾ ಅವರು ಐಎಂಎಫ್‌ ತೊರೆದು 2022ರ ಜನವರಿಯಲ್ಲಿ ಹಾರ್ವರ್ಡ್‌ ವಿಶ್ವವಿದ್ಯಾಲಯಕ್ಕೆ ಮರಳಬೇಕಿತ್ತು. ಆದರೆ, ಅವರು ಈಗ ಐಎಂಎಫ್‌ನಲ್ಲಿಯೇ ಮುಂದುವರಿಯಲು ತೀರ್ಮಾನಿಸಿದ್ದಾರೆ ಎಂದು ಕ್ರಿಸ್ಟಲೀನಾ ಹೇಳಿದ್ದಾರೆ. ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರ ಹುದ್ದೆಯನ್ನು ನಿಭಾಯಿಸಿದ ಮೊದಲ ಮಹಿಳೆ ಗೀತಾ.

‘ಗೀತಾ ಅವರು ಸಂಸ್ಥೆಯಲ್ಲಿ ಕರ್ತವ್ಯ ಮುಂದುವರಿಸಲು ತೀರ್ಮಾನಿಸಿರುವುದು ನನಗೆ ಸಂತಸ ತಂದಿದೆ. ನಾವು ಕಂಡ ಅತ್ಯಂತ ತೀವ್ರವಾದ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಗೀತಾ ಅವರು ನೀಡಿರುವ ಬೌದ್ಧಿಕ ನಾಯಕತ್ವವು ಅಸಾಮಾನ್ಯವಾದುದು’ ಎಂದು ಕ್ರಿಸ್ಟಲೀನಾ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT