ನವದೆಹಲಿ:ಭಾರತವು ತನ್ನ ತೈಲ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯ ಇದೆ ಎಂದು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಅಭಿಪ್ರಾಯಪಟ್ಟಿದೆ.

ಸದ್ಯ ದೇಶವು ಆಮದು ಮಾಡಿಕೊಳ್ಳುತ್ತಿರುವ ಪ್ರಮಾಣದಲ್ಲಿ 10 ದಿನಕ್ಕೆ ಆಗುವಷ್ಟನ್ನು ಮಾತ್ರವೇ ಸಂಗ್ರಹಿಸಿ ಇಡಬಲ್ಲದು.

ದೇಶಿ ತೈಲ ಬೇಡಿಕೆ ಹೆಚ್ಚುತ್ತಿದೆ. ತೈಲ ಬಿಕ್ಕಟ್ಟು ಸಂಭವಿಸಿ ಆಮದು ಸ್ಥಗಿತಗೊಂಡರೆ ಅಥವಾ ಪೂರೈಕೆಯಲ್ಲಿ ವಿಳಂಬವಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಕಡೆಗೆ ಗಮನ ನೀಡುವಂತೆ ಸಲಹೆ ನೀಡಿದೆ.

ಐಇಎ ಸದಸ್ಯ ರಾಷ್ಟ್ರಗಳು 90 ದಿನಕ್ಕೆ ಆಗುವಷ್ಟು ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿವೆ. ಭಾರತದ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. 90 ದಿನಕ್ಕೆ ಆಗುವಷ್ಟು ಸಂಗ್ರಹಿಸಲು ಸಾಧ್ಯವಾದರೆ ಆಗ ಭಾರತವು ಒಕ್ಕೂಟದ ಪೂರ್ಣಾವಧಿ ಸದಸ್ಯತ್ವ ಪಡೆಯಲಿದೆ ಎಂದು ಹೇಳಿದೆ. ಸದ್ಯ ಐಇಎನ ಸಹ ಸದಸ್ಯ ರಾಷ್ಟ್ರವಾಗಿದೆ.

ಸಂಗ್ರಹಾಗಾರ: ಸದ್ಯ, 53.3 ಲಕ್ಷ ಟನ್‌ಗಳಷ್ಟು ಪ್ರಮಾಣದ ಕಚ್ಚಾ ತೈಲವನ್ನು ಮಂಗಳೂರಿನ ಪಾದೂರು ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಸಂಗ್ರಹಿಸಲಾಗುತ್ತಿದೆ.

ಎರಡನೇ ಹಂತದಲ್ಲಿ65 ಲಕ್ಷ ಟನ್‌ಗಳ ಸಾಮರ್ಥ್ಯದ ಸಂಗ್ರಹಾಗಾರ ನಿರ್ಮಿಸಲಾಗುತ್ತಿದ್ದು, ಒಡಿಶಾದ ಚಂಡಿಕೋಲ್ ಮತ್ತು ಮಂಗಳೂರಿನ ಪಾದೂರಿನಲ್ಲಿ ತೈಲಗಾರಗಳು ನಿರ್ಮಾಣವಾಗಲಿವೆ.

ತೈಲ ದರ ಇಳಿಕೆ, ಇಂಧನ ದರ ಏರಿಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆ ಕಾಣುತ್ತಿದ್ದರೂ ದೇಶಿ ಮಾರುಕಟ್ಟೆಯಲ್ಲಿ ಇಂಧನ ದರ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಲೇ ಇದೆ.

ಜನವರಿ 6 ರಿಂದ 10ರವರೆಗೆ ಬ್ರೆಂಟ್ ತೈಲ ದರ ಒಂದು ಬ್ಯಾರೆಲ್‌ಗೆ 4.32 ಡಾಲರ್‌ಗಳಷ್ಟು ಕಡಿಮೆಯಾಗಿ ₹ 65.30 ಡಾಲರ್‌ಗಳಿಗೆ ಇಳಿಕೆ ಕಂಡಿದೆ. ಆದರೆ, ಪ್ರತಿ ಲೀಟರ್ ಪೆಟ್ರೋಲ್ ದರ 34 ಪೈಸೆ ಹೆಚ್ಚಾಗಿ ₹ 78.56ಕ್ಕೆ ಮತ್ತು ಡೀಸೆಲ್ ದರ 53 ಪೈಸೆ ಹೆಚ್ಚಾಗಿ ₹ 71.48ಕ್ಕೆ ತಲುಪಿದೆ.

ತೈಲ ದರ ಇಳಿಕೆ, ಇಂಧನ ದರ ಏರಿಕೆ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆ ಕಾಣುತ್ತಿದ್ದರೂ ದೇಶಿ ಮಾರುಕಟ್ಟೆಯಲ್ಲಿ ಇಂಧನ ದರ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಲೇ ಇದೆ.

ಪೂರೈಕೆ ಹೆಚ್ಚಳ, ಬೆಲೆ ಇಳಿಕೆ:ಜಾಗತಿಕ ಮಾರುಕಟ್ಟೆಗೆ ತೈಲ ಪೂರೈಕೆ ಉತ್ತಮವಾಗಿದೆ.ಒಂದು ದಿನಕ್ಕೆ 10 ಲಕ್ಷ ಬ್ಯಾರೆಲ್‌ಗಳಷ್ಟು ಹೆಚ್ಚುವರಿಯಾಗಿ ಪೂರೈಕೆಯಾಗುತ್ತಿದ್ದು, ಬೆಲೆಯಲ್ಲಿ ಇಳಿಕೆ ಆಗಲಿದೆ ಎಂದು ಐಇಎ ಹೇಳಿದೆ.

‘ಅಮೆರಿಕ–ಇರಾನ್ ಸೇನಾ ಸಂಘರ್ಷದಿಂದಾಗಿ ತೈಲ ಬೆಲೆಯು ಸದ್ಯ ಏರುಮುಖವಾಗಿದೆಯಷ್ಟೆ. ನಿಧಾನವಾಗಿ ಇಳಿಕೆ ಕಾಣಲಿದೆ’ ಎಂದು ಐಇಎನ ಕಾರ್ಯನಿರ್ವಾಹಕ ನಿರ್ದೇಶಕ ಫತಿಹ್ ಬಿರೋಲ್ ತಿಳಿಸಿದ್ದಾರೆ.

‘ಇಂಧನ ದರ ಏರಿಕೆ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಕೊರತೆ ಉಂಟಾಗಿಲ್ಲ’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.