ನವದೆಹಲಿ: ರಾಜಧಾನಿಯಲ್ಲಿ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ₹136 ಇಳಿಕೆ ಕಂಡಿದ್ದು, ₹ 48,813 ಬೆಲೆ ದಾಖಲಾಗಿದೆ. ವಿದೇಶಿ ವಿನಿಮಯದಲ್ಲಿ ಡಾಲರ್ ಎದುರು ರೂಪಾಯಿ ಬೆಲೆ ಚೇತರಿಕೆ ಮತ್ತು ಜಾಗತಿಕ ಮಟ್ಟದಲ್ಲಿ ಬಂಗಾರದ ಬೆಲೆಯಲ್ಲಿ ಕುಸಿತ ಕಂಡಿರುವುದೇ ಬೆಲೆ ಇಳಿಕೆಗೆ ಕಾರಣ ಎಂದು ಎಚ್ಡಿಎಫ್ಸಿ ಸೆಕ್ಯೂರಿಟೀಸ್ ತಿಳಿಸಿದೆ.

ಈ ಹಿಂದಿನ ವಹಿವಾಟಿನಲ್ಲಿ 10 ಗ್ರಾಂ ಹಳದಿ ಲೋಹದ ಬೆಲೆ ₹48,949 ಗೆ ಕೊನೆಗೊಂಡಿತ್ತು. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 16 ಪೈಸೆ ಏರಿಕೆ ಕಂಡ ಹಿನ್ನೆಲೆಯಲ್ಲಿ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡಿದೆ.

ಇದರ ಜೊತಗೆ, ಬೆಳ್ಳಿ ಬೆಲೆಯಲ್ಲೂ ಪ್ರತಿ ಕೆ.ಜಿಗೆ ₹346 ಕುಸಿದಿದ್ದು, ನಿನ್ನೆ ₹ 63,689 ಇದ್ದ ಪ್ರತಿ ಕೆ.ಜಿ ಬೆಳ್ಳಿ ಬೆಲೆ ಇಂದು ₹ 63,343ಕ್ಕೆ ಕುಸಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.