ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಇಟಿಎಫ್‌: ಜೂನ್‌ ತ್ರೈಮಾಸಿಕದಲ್ಲಿ ₹ 1,328 ಕೋಟಿ ಹೂಡಿಕೆ

Last Updated 18 ಜುಲೈ 2021, 11:15 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) 2020ರ ಜೂನ್‌ ತ್ರೈಮಾಸಿಕಕ್ಕೆ ಹೋಲಿಸಿದರೆ 2021ರ ಜೂನ್‌ ತ್ರೈಮಾಸಿಕದಲ್ಲಿ ಬಂಡವಾಳ ಒಳಹರಿವು ಕಡಿಮೆ ಆಗಿದೆ.

ಹೂಡಿಕೆದಾರರು 2021ರ ಜೂನ್‌ ತ್ರೈಮಾಸಿಕದಲ್ಲಿ ₹ 1,328 ಕೋಟಿ ಬಂಡವಾಳ ತೊಡಗಿಸಿದ್ದಾರೆ. 2020ರ ಜೂನ್‌ ತ್ರೈಮಾಸಿಕದಲ್ಲಿ ₹ 2,040 ಕೋಟಿ ಹೂಡಿಕೆ ಆಗಿತ್ತು. ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಈ ಮಾಹಿತಿ ನೀಡಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಆರ್ಥಿಕ ಬೆಳವಣಿಗೆಯ ಕುರಿತು ಅನಿಶ್ಚಿತತೆ ಮೂಡಿತ್ತು. ಇದರಿಂದಾಗಿ ಕಳೆದ ವರ್ಷದ ಜೂನ್ ತ್ರೈಮಾಸಿಕದಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ಒಳಹರಿವು ಉತ್ತಮವಾಗಿತ್ತು. ಈ ವರ್ಷ ಆರ್ಥಿಕ ಚೇತರಿಕೆಯ ಆಶಾವಾದ ಹೆಚ್ಚು ಇರುವ ಕಾರಣ, ಒಳಹರಿವು ಸ್ವಲ್ಪ ಕಡಿಮೆ ಆಗಿದೆ ಎಂದು ಕ್ವಾಂಟಂ ಮ್ಯೂಚುವಲ್‌ ಫಂಡ್‌ನ ಹಿರಿಯ ನಿಧಿ ನಿರ್ವಾಹಕ ಚಿರಾಗ್‌ ಮೆಹ್ತಾ ಹೇಳಿದ್ದಾರೆ.

ಗ್ರೀನ್‌ ಪೋರ್ಟ್‌ಫೋಲಿಯೊ ಕಂಪನಿಯ ಸಹ ಸ್ಥಾಪಕ ದಿವಂ ಶರ್ಮಾ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೋವಿಡ್‌ ಮೊದಲ ಅಲೆಯು ಸೃಷ್ಟಿಸಿದ್ದ ಆರ್ಥಿಕ ಅನಿಶ್ಚಿತ ಪರಿಸ್ಥಿತಿಯ ಕಾರಣದಿಂದಾಗಿ 2020-21ರ ಮೊದಲಾರ್ಧದಲ್ಲಿ ಚಿನ್ನದ ಇಟಿಎಫ್‌ನಲ್ಲಿ ಗರಿಷ್ಠ ಹೂಡಿಕೆ ಆಗಿತ್ತು. ಹೂಡಿಕೆದಾರರು ಚಿನ್ನದ ಮೇಲೆ ಹೆಚ್ಚು ಹೂಡಿಕೆ ಮಾಡಲು ಬಯಸಿದ್ದರು. ಈಗ, ಅವರು ತಮ್ಮ ಹೂಡಿಕೆ ಹಣವನ್ನು ಬೇರೆ ಬೇರೆ ಕಡೆಗಳಲ್ಲಿ ವಿನಿಯೋಗ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಹೂಡಿಕೆ ತಗ್ಗಿದ್ದರೂ, ಚಿನ್ನದ ಇಟಿಎಫ್‌ಗಳಲ್ಲಿನ ನಿರ್ವಹಣಾ ಸಂಪತ್ತು ಮೌಲ್ಯವು ಜೂನ್‌ ಅಂತ್ಯಕ್ಕೆ ₹ 16,225 ಕೋಟಿಗೆ ತಲುಪಿದೆ. 2020ರ ಜೂನ್‌ ಅತ್ಯಂದಲ್ಲಿ ನಿರ್ವಹಣಾ ಸಂಪತ್ತು ಮೌಲ್ಯ ₹ 10,857 ಕೋಟಿಗಳಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT