ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಆಮದು ಶೇ 17ರಷ್ಟು ಇಳಿಕೆ

Last Updated 27 ನವೆಂಬರ್ 2022, 18:06 IST
ಅಕ್ಷರ ಗಾತ್ರ

ನವದೆಹಲಿ: ಚಿನ್ನದ ಆಮದು ಮೌಲ್ಯವು ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ₹ 1.96 ಲಕ್ಷ ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 17.38ರಷ್ಟು ಇಳಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ.

2021–22ರ ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ಆಮದು ಮೌಲ್ಯ ₹ 2.36 ಲಕ್ಷ ಕೋಟಿ ಇತ್ತು. 2022ರ ಅಕ್ಟೋಬರ್‌ ತಿಂಗಳಿನಲ್ಲಿಯೂ ಚಿನ್ನದ ಆಮದು ಶೇ 27.47ರಷ್ಟು ಇಳಿಕೆ ಕಂಡಿದ್ದು, ₹ 30,217 ಕೋಟಿಗೆ ತಲುಪಿದೆ.

ಬೆಳ್ಳಿ ಆಮದು ಮೌಲ್ಯವು ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ₹ 12,413 ಕೋಟಿಯಿಂದ ₹ 39,201ಕೋಟಿಗೆ ಏರಿಕೆ ಆಗಿದೆ.

ಹರಳು ಮತ್ತು ಆಭರಣ ರಫ್ತು 2022ರ ಏಪ್ರಿಲ್‌–ಅಕ್ಟೋಬರ್‌ ಅವಧಿಯಲ್ಲಿ ಶೇ 1.81ರಷ್ಟು ಏರಿಕೆ ಕಂಡು ₹ 1.96 ಲಕ್ಷ ಕೋಟಿಗೆ ತಲುಪಿದೆ ಎಂದು ಸಚಿವಾಲಯವು ತಿಳಿಸಿದೆ.

ಭಾರತವು ಅತಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ. ವಾರ್ಷಿಕವಾಗಿ 800 ರಿಂದ 900 ಟನ್‌ ಆಮದು ಮಾಡಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT