ಬುಧವಾರ, ನವೆಂಬರ್ 13, 2019
28 °C

ಚಿನ್ನದ ಆಮದು ಶೇ 33 ಇಳಿಕೆ

Published:
Updated:

ಮುಂಬೈ: ದೇಶದ ಚಿನ್ನದ ಆಮದು ಸತತ ನಾಲ್ಕನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ.

2018ರ ಅಕ್ಟೋಬರ್‌ನಲ್ಲಿ 57 ಟನ್‌ ಆಮದಾಗಿತ್ತು. 2019ರಲ್ಲಿ 38 ಟನ್‌ಗಳಿಗೆ ಅಂದರೆ ಶೇ 33ರಷ್ಟು ಇಳಿಕೆಯಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಆದರೆ, ಮೌಲ್ಯದ ಲೆಕ್ಕದಲ್ಲಿ ₹ 12,496 ಕೋಟಿಗಳಿಂದ ₹ 13,064 ಕೋಟಿಗಳಿಗೆ ಏರಿಕೆಯಾಗಿದೆ.

ಚಿನ್ನದ ದರ ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಹಬ್ಬದ ಸಂದರ್ಭದಲ್ಲಿ ಬೇಡಿಕೆ ಕಡಿಮೆ ಆಗಿದೆ ಎಂದು ಮಾಹಿತಿ ನೀಡಿವೆ.

ಪ್ರತಿಕ್ರಿಯಿಸಿ (+)