ಮಂಗಳವಾರ, ಮೇ 24, 2022
29 °C

ಮತ್ತೆ ಚಿನ್ನದ ದರ ಹೆಚ್ಚಳ; ಬೆಳ್ಳಿ ಧಾರಣೆಯೂ ಅಲ್ಪ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಚಿನ್ನ– ಪ್ರಾತಿನಿಧಿಕ ಚಿತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ದರ ಚೇತರಿಕೆ ಕಂಡಿದೆ. ಸೋಮವಾರದ ವಹಿವಾಟಿನಲ್ಲಿ ₹ 464ರಷ್ಟು ಇಳಿಕೆಯಾಗಿದ್ದ 10 ಗ್ರಾಂ ಚಿನ್ನದ ದರ, ಇಂದು ₹ 303ರಷ್ಟು ಗಳಿಕೆ ದಾಖಲಿಸಿದೆ.

ಪ್ರಸ್ತುತ 10 ಗ್ರಾಂ ಚಿನ್ನ ₹ 47,853 ತಲುಪಿದ್ದು, ಇದು ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆಯ ಪರಿಣಾಮವಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ವಿಶ್ಲೇಷಿಸಿದೆ.

ಪ್ರತಿ ಕೆ.ಜಿ.ಗೆ ₹ 723ರಷ್ಟು ಕಡಿಮೆ ಆಗಿದ್ದ ಬೆಳ್ಳಿ ಧಾರಣೆ, ₹ 134ರಷ್ಟು ಏರಿಕೆಯಾಗಿ ಕೆ.ಜಿ.ಗೆ ₹ 70,261 ಆಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ ಚಿನ್ನ 1,864.50 ಅಮೆರಿಕನ್‌ ಡಾಲರ್‌ ಹಾಗೂ ಪ್ರತಿ ಔನ್ಸ್‌ ಬೆಳ್ಳಿ 27.65 ಅಮೆರಿಕನ್‌ ಡಾಲರ್‌ಗಳಲ್ಲಿ ವಹಿವಾಟು ನಡೆದಿದೆ.

ಅಮೆರಿಕದ ಫೆಡರಲ್‌ ರಿಸರ್ವ್ ಸಭೆಯತ್ತ ಹೂಡಿಕೆದಾರರ ಗಮನ ಹರಿದಿರುವುದರಿಂದ ಚಿನ್ನದ ದರದಲ್ಲಿ ಏರಿಳಿತವಾಗುತ್ತಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ (ಕಮಾಡಿಟೀಸ್‌) ತಪನ್‌ ಪಟೇಲ್‌ ಹೇಳಿದ್ದಾರೆ.

(1 ಔನ್ಸ್‌ 28.34 ಗ್ರಾಂ ಗಳಿಗೆ ಸಮ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು