ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ದರ 10 ಗ್ರಾಂಗೆ ₹ 499 ಏರಿಕೆ

Last Updated 19 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಚಿನ್ನದ ಧಾರಣೆಯು ತಲಾ 10 ಗ್ರಾಂಗೆ ಗರಿಷ್ಠ ₹ 499ರವರೆಗೂ ಏರಿಕೆಯಾಗಿದೆ.

ಮುಂಬೈ ಚಿನಿವಾರ ಪೆಟೆಯಲ್ಲಿ ₹499ರಂತೆ ಏರಿಕೆಯಾಗಿ 10 ಗ್ರಾಂಗೆ ₹40,970ರಂತೆ ಮಾರಾಟವಾಯಿತು. ದೆಹಲಿಯಲ್ಲಿ 10 ಗ್ರಾಂಗೆ ₹462ರಂತೆ ಏರಿಕೆಯಾಗಿ ₹ 42,339ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ₹430ರಂತೆ ಹೆಚ್ಚಾಗಿ ₹41,650ರಂತೆ ಮಾರಾಟವಾಯಿತು.

ಮದುವೆ ಸಮಾರಂಭದ ಬೇಡಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಾಗಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ಏರಿಕೆ ಕಂಡಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.

ಬೆಳ್ಳಿ ದರ ಮುಂಬೈನಲ್ಲಿ ಕೆ.ಜಿ ₹1,155ರಂತೆ ಹೆಚ್ಚಾಗಿ ₹ 47,700ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT