ಸಂಪತ್ತು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಹಿಂದಿನಿಂದಲೂ ಚಾಲ್ತಿಯಲ್ಲಿ ಇರುವ ಕೆಲವು ಪದ್ಧತಿಗಳು ಇವೆ. ಮನೆಯ ಅಕ್ಕಿ ಡಬ್ಬಿಯಲ್ಲಿ ಹಣ ಇರಿಸುವುದು, ಜಮೀನು ಕೊಳ್ಳುವುದು, ಮನೆಗಳಲ್ಲಿ ಬಳಕೆ ಮಾಡಬಹುದಾದ ಕೆಲವು ಉಪಕರಣಗಳನ್ನು ಖರೀದಿಸುವುದು ಹಣವನ್ನು ಉಳಿತಾಯ ಮಾಡಲು ಇರುವ ಕೆಲವು ಮಾರ್ಗಗಳು. ಅವುಗಳ ಸಾಲಿಗೆ ಸೇರುವ ಒಂದು ಮುಖ್ಯವಾದ ಹೂಡಿಕೆ ಮಾರ್ಗ ಚಿನ್ನದ ಖರೀದಿ.

‘ಚಿನ್ನದ ಮೇಲೆ ಹೂಡಿಕೆ ಮಾಡಿ’ ಎಂದು ಹಿರಿಯರು ಹೇಳುತ್ತಿದ್ದ ಕಿವಿಮಾತು ಸರಿಯಾದುದೇ. ಚಿನ್ನದ ಮೇಲಿನ ಹೂಡಿಕೆಯ ಪ್ರಯೋಜನಗಳು ಹಲವು. ಇದು ಕಷ್ಟಕಾಲಕ್ಕೆ ಆಸರೆಗೆ ಬರುವುದಷ್ಟೇ ಅಲ್ಲದೆ, ವೈವಿಧ್ಯತೆ ಇರುವ ಪೋರ್ಟ್ಫೋಲಿಯೊ ಒಂದನ್ನು ರೂಪಿಸಿಕೊಳ್ಳಲು ಕೂಡ ನೆರವಾಗುತ್ತದೆ. ಚಿನ್ನಾಭರಣಗಳನ್ನು ಮದುವೆ, ಹಬ್ಬದಂತಹ ಶುಭ ಸಮಾರಂಭಗಳಲ್ಲಿ ಬಳಸುವುದು ಸಾಂಪ್ರದಾಯಿಕ ಆಚರಣೆಯಂತೆ ಬೆಳೆದುಬಂದಿದೆ. ಪ್ರೀತಿಪಾತ್ರರಿಗೆ ಚಿನ್ನವನ್ನು ಉಡುಗೊರೆಯಾಗಿ ನೀಡುವುದು ಕೂಡ ಸಂಪ್ರದಾಯದ ಭಾಗದಂತೆ ಬೆಳೆದಿದೆ. ಆದರೆ ಚಿನ್ನದ ಬಳಕೆಯು ಇವಷ್ಟಕ್ಕೇ ಸೀಮಿತವಾಗಿಲ್ಲ.

ಚಿನ್ನವು ಒಂದಿಷ್ಟು ಭಾವನಾತ್ಮಕ ನಂಟನ್ನೂ ತನ್ನೊಂದಿಗೆ ಹೊತ್ತಿದೆ. ಜೊತೆಗೆ ಇದನ್ನು ಅಡಮಾನವಾಗಿ ಇರಿಸಿ ಸಾಲ ಪಡೆದು, ಕೆಲವು ಕನಸುಗಳನ್ನು ಸಾಕಾರ ಮಾಡಿಕೊಳ್ಳಲೂ ಅವಕಾಶ ಇದೆ. ಸರಿಯಾಗಿ, ನಿಖರವಾಗಿ ಯೋಜಿಸಿ ಕೆಲಸ ಮಾಡಿದರೆ, ಹಣಕಾಸಿನ ಗುರಿಗಳಿಗೆ ಅನುಗುಣವಾಗಿ ಮುಂದಡಿ ಇರಿಸಿದರೆ ಚಿನ್ನದ ಮೇಲಿನ ಸಾಲದಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಅವಕಾಶ ಇದೆ.

ಚಿನ್ನವು ಬಳಕೆಗೆ ಬರುವುದು ಮದುವೆಯಂತಹ ಸಂದರ್ಭಗಳು, ಧಾರ್ಮಿಕ ಕಾರ್ಯಕ್ರಮಗಳು ಅಥವಾ ವಿಶೇಷವಾದ ಆಚರಣೆಗಳ ಹೊತ್ತಿನಲ್ಲಿ ಮಾತ್ರವೇ ಅಲ್ಲ. ಈಚಿನ ವರ್ಷಗಳಲ್ಲಿ ಚಿನ್ನವನ್ನು ಹಲವು ಬಗೆಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾದ ಹಣಕಾಸಿನ ಆಸ್ತಿಯನ್ನಾಗಿಯೂ ಕಾಣಲಾಗುತ್ತಿದೆ. ಇದನ್ನು ಸಾಲಕ್ಕೆ ಅಡಮಾನವಾಗಿಯೂ ಬಳಕೆ ಮಾಡಿಕೊಳ್ಳಬಹುದು. ಚಿನ್ನದ ಆಭರಣಗಳನ್ನು ಅಥವಾ ಚಿನ್ನದ ಇತರ ರೂಪಗಳನ್ನು ಅಡಮಾನವಾಗಿ ಇರಿಸಿ ಸಾಲ ಪಡೆಯಬಹುದು. ಸಾಲ ಪಡೆಯಲು ಇದು
ಸುಲಭದ ಮಾರ್ಗ, ತ್ವರಿತವಾಗಿ ಸಾಲ ಪಡೆಯುವ ವಿಧಾನ ಇದು. ಚಿನ್ನದ ಸಾಲ ಪಡೆಯುವ ಪ್ರಕ್ರಿಯೆಯು ಇತರ ಬಗೆಯ ಸಾಲಗಳಿಗೆ ಹೋಲಿಸಿದರೆ ಅಡಚಣೆಗಳು ಇಲ್ಲದ್ದು. ಅಡಮಾನವಾಗಿ ಇರಿಸುವ ಚಿನ್ನದ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ಸಾಲದ ಮೊತ್ತವನ್ನು ನಿರ್ಧರಿಸಲಾಗುತ್ತದೆ.

ಆದರೆ, ಚಿನ್ನದ ಸಾಲವನ್ನು ಮೊದಲ ಬಾರಿಗೆ ಪಡೆಯುವ ಬಗ್ಗೆ ಆಲೋಚಿಸುತ್ತಿರುವವರು, ಸತ್ಯ ಮತ್ತು ಮಿಥ್ಯೆಗಳನ್ನು ಸರಿಯಾಗಿ ತಿಳಿದುಕೊಳ್ಳುವುದರಿಂದ ಹೆಚ್ಚು ಮಾಹಿತಿಪೂರ್ಣವಾದ ನಿರ್ಧಾರ ತೆಗೆದುಕೊಳ್ಳಲು ಆಗುತ್ತದೆ. ಚಿನ್ನದ ಮೇಲಿನ ಸಾಲದ ವಿಚಾರವಾಗಿ ಹಲವು ನಂಬಿಕೆಗಳು ಇವೆ. ಆದರೆ ಇವೆಲ್ಲ ಈ ಹಣಕಾಸಿನ ಉತ್ಪನ್ನಗಳ ಕುರಿತಾಗಿನ ಸರಿಯಾದ ನಂಬಿಕೆಯೇ ಆಗಿರುತ್ತದೆ ಎನ್ನಲಾಗದು. ಚಿನ್ನದ ಸಾಲದ ಸುತ್ತಲಿನ ಕೆಲವು ಮಿಥ್ಯೆಗಳ ಬಗ್ಗೆ ಸ್ಪಷ್ಟನೆ ನೀಡುವ ಪ್ರಯತ್ನ ಇಲ್ಲಿದೆ. ಈ ಸಾಲದ ಕುರಿತಾಗಿ ಕೆಲವು ಸ್ಪಷ್ಟನೆಗಳನ್ನು ಇದು ನೀಡಿದೆ. ಮೊದಲ ಬಾರಿಗೆ ಚಿನ್ನದ ಸಾಲ ಪಡೆಯುತ್ತಿರುವವರು, ಹೆಚ್ಚಿನ ಸ್ಪಷ್ಟತೆ ಹಾಗೂ ವಿಶ್ವಾಸದಿಂದ ಸಾಲದ ಬಗ್ಗೆ ಮುಂದಡಿ ಇರಿಸಲು ಇದು ನೆರವಾಗುತ್ತದೆ.

ಲೇಖಕ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ಚಿನ್ನದ ಸಾಲ ವಿಭಾಗದ ರಾಷ್ಟ್ರೀಯ ವ್ಯವಸ್ಥಾಪಕ

ಚಿನ್ನದ ಸಾಲ ಕುರಿತ ಮಿಥ್ಯೆ ಹಾಗೂ ವಾಸ್ತವ: ಚಿನ್ನದ ಸಾಲ ಎಂಬುದು ತುರ್ತು ಸಂದರ್ಭಕ್ಕೆ ಮಾತ್ರ ವಾಸ್ತವ: ಚಿನ್ನದ ಸಾಲ ಒಂದೇ ಸಂದರ್ಭ ಅಥವಾ ಒಂದೇ ಉದ್ದೇಶಕ್ಕೆ ಸೀಮಿತವಲ್ಲ. ಈ ಸಾಲವು ದೇಶದಾದ್ಯಂತ ಬಹಳ ಜನಪ್ರಿಯ. ಇದು ತುರ್ತು ಸಂದರ್ಭಗಳಲ್ಲಿ ಮಾತ್ರವೇ ತೆಗೆದುಕೊಳ್ಳಬಹುದಾದುದಲ್ಲ. ಎಂಎಸ್ಎಂಇ ವಲಯದ ಉದ್ದಿಮೆಗಳು ವರ್ತಕರು ರೈತರು ವೇತನದಾರರು ತಮ್ಮ ಹಲವು ಅಗತ್ಯಗಳನ್ನು ಪೂರೈಸಿಕೊಳ್ಳಲು ಇದನ್ನು ಪಡೆಯಬಹುದು. ಅಂದರೆ ಕಾರ್ಯಾಚರಣೆ ಬಂಡವಾಳಕ್ಕಾಗಿ ಉದ್ದಿಮೆ ವಹಿವಾಟಿನ ವಿಸ್ತರಣೆಗೆ ಸಾಮಾಜಿಕ ಹಾಗೂ ವೈಯಕ್ತಿಕ ಹೊಣೆಗಳನ್ನು ನಿಭಾಯಿಸುವುದಕ್ಕೆ ಈ ಸಾಲ ಪಡೆಯಬಹುದು. ಇಂದು ಹಲವರು ತ್ವರಿತವಾಗಿ ಸುಲಭವಾಗಿ ಸಾಲ ಪಡೆಯಲು ಚಿನ್ನದ ಮೊರೆ ಹೋಗುತ್ತಾರೆ. ತಮ್ಮಲ್ಲಿರುವ ಚಿನ್ನವನ್ನು ಬಳಸಿಕೊಂಡು ಅವರು ದಾಖಲೆಗಳ ಪರಿಶೀಲನೆ ಅಥವಾ ಕ್ರೆಡಿಟ್ ಅಂಕ ಪರಿಶೀಲನೆಯ ಗೊಡವೆ ಇಲ್ಲದೆ ಸಾಲ ಪಡೆಯುತ್ತಾರೆ. ಚಿನ್ನವು ಭಿನ್ನ ಹಿನ್ನೆಲೆಗಳ ವ್ಯಕ್ತಿಗಳಿಗೆ ಬಹಳ ನಂಬಿಕಸ್ಥ ಹಣಕಾಸಿನ ನೆರವಿನ ರೂಪದಲ್ಲಿ ಒದಗಿಬರುತ್ತಿದೆ.

ಮಿಥ್ಯೆ: ಚಿನ್ನದ ಅಡಮಾನ ಸಾಲಕ್ಕೆ ಬಡ್ಡಿ ಹೆಚ್ಚು ವಾಸ್ತವ: ಚಿನ್ನದ ಮೇಲಿನ ಸಾಲಕ್ಕೆ ನಿಗದಿ ಮಾಡುವ ಬಡ್ಡಿ ದರವು ಸಾಮಾನ್ಯವಾಗಿ ವೈಯಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಾಲದ ಮೇಲಿನ ಬಡ್ಡಿ ದರಕ್ಕೆ ಸಮನಾಗಿ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಅವುಗಳಿಗೆ ಇರುವ ಬಡ್ಡಿ ದರಕ್ಕಿಂತ ಕಡಿಮೆಯೂ ಆಗಿರುತ್ತದೆ. ಆರ್ಬಿಐ ರೂಪಿಸಿರುವ ನಿಯಂತ್ರಣ ಕ್ರಮಗಳು ಪಾರದರ್ಶಕವಾದ ಶುಲ್ಕಗಳ ಕಾರಣದಿಂದಾಗಿ ಸಾಲ ಪಡೆಯುವವರು ನ್ಯಾಯಸಮ್ಮತವಾದ ಹಾಗೂ ಸ್ಪರ್ಧಾತ್ಮಕವಾದ ಬಡ್ಡಿ ದರಕ್ಕೆ ಸಾಲ ಪಡೆಯಬಹುದು. ಮಿಥ್ಯೆ: ಅಡಮಾನವಾಗಿ ಇರಿಸಿದ ಚಿನ್ನವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ

ವಾಸ್ತವ: ಅಡಮಾನವಾಗಿ ಇರಿಸಿದ ಚಿನ್ನವನ್ನು ಸುರಕ್ಷಿತವಾಗಿ ಇರಿಸಲಾಗುತ್ತದೆ ನಿಯಂತ್ರಣ ಸಂಸ್ಥೆಗಳು ಹಾಗೂ ಸಾಲ ನೀಡುವ ಕಂಪನಿಯು ರೂಪಿಸಿದ ನಿಯಮಗಳಿಗೆ ಅನುಗುಣವಾಗಿ ಅವುಗಳನ್ನು ಇರಿಸಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಾಲ ಪಡೆದವರು ಒಪ್ಪಿತ ನಿಯಮಗಳಿಗೆ ಅನುಗುಣವಾಗಿ ಸಾಲದ ಕಂತುಗಳನ್ನು ಪಾವತಿಸುತ್ತ ಇರುವವರೆಗೆ ಅವರು ಅಡಮಾನವಾಗಿ ಇರಿಸಿದ ಚಿನ್ನದ ಮೇಲೆ ಪೂರ್ಣ ಮಾಲೀಕತ್ವ ಹೊಂದಿರುತ್ತಾರೆ. ಸಾಲ ಮರುಪಾವತಿ ಸಾಧ್ಯವಾಗದೆ ಇದ್ದಲ್ಲಿ ಅಡಮಾನವಾಗಿ ಇರಿಸಿದ ಚಿನ್ನವು ಹರಾಜಿನ ಮೂಲಕ ಮಾರಾಟವಾಗುವ ಮೊದಲು ಅದನ್ನು ವಾಪಸ್ ಪಡೆದುಕೊಳ್ಳಲು ಸಾಲಗಾರರಿಗೆ ಅವಕಾಶವನ್ನು ಕಾನೂನು ಕಲ್ಪಿಸಿಕೊಡುತ್ತದೆ. ಮಿಥ್ಯೆ: ಚಿನ್ನದ ಸಾಲವು ಅಲ್ಪಾವಧಿಗೆ ಮಾತ್ರ ಲಭ್ಯ ವಾಸ್ತವ: ದೇಶದ ಸಾಲದಾತ ಕಂಪನಿಗಳು ಬೇರೆ ಬೇರೆ ಅವಧಿಗೆ ಚಿನ್ನದ ಸಾಲವನ್ನು ನೀಡುತ್ತಿವೆ. ಅವಧಿಯು ಕೆಲವು ತಿಂಗಳುಗಳಿಂದ ಆರಂಭಿಸಿ ಕೆಲವು ವರ್ಷಗಳವರೆಗೆ ವಿಸ್ತರಿಸುವುದೂ ಇದೆ. ಸಾಲ ನೀಡುವ ಕಂಪನಿಯ ಅನುಕೂಲವನ್ನು ಆಧರಿಸಿ ಅವಧಿಯು ನಿರ್ಧಾರವಾಗುತ್ತದೆ. ಸಾಲ ಪಡೆಯುವವರು ಸಾಲದ ಅವಧಿ ಪೂರ್ಣಗೊಳ್ಳುವ ದಿನ ಅಸಲು ಮತ್ತು ಬಡ್ಡಿಯನ್ನು ಒಟ್ಟಾಗಿ ಒಂದೇ ಬಾರಿಗೆ ಮರುಪಾವತಿಸುವ ತಿಂಗಳಿಗೊಮ್ಮೆ ಬಡ್ಡಿ ಮಾತ್ರ ಪಾವತಿಸಿ ಅಸಲನ್ನು ಕೊನೆಯಲ್ಲಿ ಪಾವತಿಸುವ ಇಎಂಐ ಮೂಲಕ ಪಾವತಿಸುವ ಆಯ್ಕೆಗಳನ್ನು ಪಡೆದುಕೊಳ್ಳಬಹುದು. ಒ.ಡಿ ಸೌಲಭ್ಯವೂ ಚಿನ್ನದ ಮೇಲಿನ ಸಾಲದಲ್ಲಿ ಇರುತ್ತದೆ. ಅಲ್ಪಾವಧಿ ಹಾಗೂ ದೀರ್ಘಾವಧಿ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಬ್ಯಾಂಕುಗಳು ಮರುಪಾವತಿ ಅವಧಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸುತ್ತವೆ. ಆ ಮೂಲಕ ಚಿನ್ನದ ಸಾಲವು ಸಾಲ ಪಡೆಯುವವರ ಅಗತ್ಯಗಳಿಗೆ ಸೂಕ್ತವಾಗುವಂತೆ ಮಾಡುತ್ತವೆ. ಮಿಥ್ಯೆ: ಚಿನ್ನದ ಸಾಲವು ಕ್ರೆಡಿಟ್ ಅಂಕದ ಮೇಲೆ ಪರಿಣಾಮ ಉಂಟುಮಾಡಬಹುದು ವಾಸ್ತವ: ಕಾನೂನಿನ ವ್ಯಾಪ್ತಿಯಲ್ಲಿ ನೀಡುವ ಇತರ ಯಾವುದೇ ಸಾಲದಂತೆ ಚಿನ್ನದ ಅಡಮಾನ ಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದಲ್ಲಿ ಅದರಿಂದ ಕ್ರೆಡಿಟ್ ಅಂಕ ಉತ್ತಮವಾಗುತ್ತದೆ. ಚಿನ್ನದ ಸಾಲದಂತಹ ಭದ್ರತೆ ಇರುವ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಅದಕ್ಕೆ ಕೆಲವೇ ಗಂಟೆಗಳಲ್ಲಿ ಅನುಮೋದನೆ ನೀಡಲಾಗುತ್ತದೆ. ಚಿನ್ನದ ಮೇಲಿನ ಸಾಲವನ್ನು ಮರುಪಾವತಿ ಮಾಡಲು ಹಲವು ಆಯ್ಕೆಗಳನ್ನು ನೀಡಲಾಗುತ್ತದೆ. ಮಿಥ್ಯೆ: ಚಿನ್ನದ ಮೇಲಿನ ಸಾಲವು ಸಣ್ಣ ಉದ್ದಿಮೆಗಳ ನೆರವಿಗೆ ಬರುವುದಿಲ್ಲ ವಾಸ್ತವ: ಭಾರತದ ಕುಟುಂಬಗಳು ಭಾರಿ ಪ್ರಮಾಣದಲ್ಲಿ ಚಿನ್ನವನ್ನು ವಿವಿಧ ರೂಪಗಳಲ್ಲಿ ಇರಿಸಿಕೊಂಡಿವೆ. ಈ ಚಿನ್ನವನ್ನು ಜವಾಬ್ದಾರಿಯುತವಾಗಿ ನಗದೀಕರಿಸಿಕೊಳ್ಳಬಹುದು. ಹೀಗೆ ನಗದೀಕರಿಸಿಕೊಂಡಲ್ಲಿ ಎಂಎಸ್ಎಂಇ ವಲಯದ ಹಲವು ಉದ್ದಿಮೆಗಳಿಗೆ ಕಾರ್ಯಾಚರಣೆ ಬಂಡವಾಳಕ್ಕೆ ಹಣ ಲಭ್ಯವಾಗುತ್ತದೆ. ಕುಟುಂಬಗಳಿಗೆ ಹಾಗೂ ಸಣ್ಣ ಉದ್ದಿಮೆಗಳಿಗೆ ಚಿನ್ನದ ಅಡಮಾನ ಸಾಲವು ಅತ್ಯಂತ ಸುಲಭವಾಗಿ ದಕ್ಕುವ ಹಾಗೂ ಅತ್ಯಂತ ಹೆಚ್ಚು ನಂಬಿಕಾರ್ಹವಾದ ಹಣದ ಮೂಲ. ಸಾಲ ನೀಡುವ ಪ್ರಕ್ರಿಯೆಯು ಪಾರದರ್ಶಕವಾಗಿ ಇರುತ್ತದೆ. ಇದರಿಂದಾಗಿ ವಿಶೇಷ ಸಂದರ್ಭಗಳಲ್ಲಿ ಸಣ್ಣ ಉದ್ದಿಮೆಗಳಿಗೆ ಕಾರ್ಯಾಚರಣೆ ಬಂಡವಾಳ ವೆಚ್ಚವನ್ನು ನಿಭಾಯಿಸಲು ವ್ಯಕ್ತಿಗಳಿಗೆ ತಮ್ಮ ವೆಚ್ಚಗಳನ್ನು ಸುಲಭವಾಗಿ ನಿಭಾಯಿಸಲು ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.