ಬುಧವಾರ, ಜನವರಿ 29, 2020
29 °C

ದೆಹಲಿಯಲ್ಲಿ ಚಿನ್ನದ ದರ ₹ 766 ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಗುರುವಾರ 10 ಗ್ರಾಂಗೆ ₹ 766ರಂತೆ ಇಳಿಕೆ ಕಂಡು ₹ 40,634ರಲ್ಲಿ ಮಾರಾಟವಾಯಿತು.

ಬೆಳ್ಳಿ ಬೆಲೆಯೂ ಕೆ.ಜಿಗೆ ₹ 1,148ರಂತೆ ಇಳಿಕೆಯಾಗಿ ₹ 47,932ರಂತೆ ಮಾರಾಟವಾಯಿತು.

ರೂಪಾಯಿ ಮೌಲ್ಯ ವೃದ್ಧಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಳಿಕೆ ಕಂಡಿದೆ. ಇದು ದೇಶಿ ಮಾರುಕಟ್ಟೆಯಲ್ಲಿಯೂ ಪ್ರತಿಫಲಿಸಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟಿಸ್‌ ತಿಳಿಸಿದೆ.

ಅಮೆರಿಕ–ಇರಾನ್‌ ಸೇನಾ ಸಂಘರ್ಷದ ತೀವ್ರತೆ ಕಡಿಮೆ ಆಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ ಎಂದೂ ಹೇಳಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು