ಮಂಗಳವಾರ, ಜನವರಿ 28, 2020
22 °C

ಚಿನ್ನದ ಬೆಲೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಮುಂಬೈ: ದೇಶದ ಚಿನಿವಾರ ಪೇಟೆಗಳಲ್ಲಿ ಸೋಮವಾರ ಆರೂವರೆ ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದ್ದ ಚಿನ್ನದ ಬೆಲೆ ಮಂಗಳವಾರ ತುಸು ಇಳಿಕೆಯಾಗಿದೆ.

ರೂಪಾಯಿ ಮೌಲ್ಯ ವೃದ್ಧಿ ಮತ್ತು ಷೇರುಪೇಟೆಯು ಸಕಾರಾತ್ಮಕ ಹಾದಿಗೆ ಮರಳಿದ್ದರಿಂದ ಚಿನ್ನದ ದರ ಇಳಿಕೆ ಕಂಡಿತು. ದೆಹಲಿಯಲ್ಲಿ ₹ 420ರಂತೆ ಇಳಿಕೆಯಾಗಿ ₹ 41,210ಕ್ಕೆ ತಲುಪಿದೆ. ಮುಂಬೈನಲ್ಲಿ ₹ 303 ಇಳಿಕೆಯಾಗಿ ₹ 40,375ಕ್ಕೆ ತಲುಪಿದೆ.

ಪೆಟ್ರೋಲ್‌, ಡೀಸೆಲ್‌ ಬೆಲೆ; ತಗ್ಗಿದ ಅಂತರ: ಈ ತಿಂಗಳ ಮೊದಲ 7 ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕ್ರಮವಾಗಿ 60 ಪೈಸೆ ಮತ್ತು 83 ಪೈಸೆ ಏರಿಕೆ ಕಂಡಿದೆ.

ತಿಂಗಳ ಹಿಂದೆ ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆ ಮಧ್ಯೆ ₹ 9 ಅಂತರ ಇತ್ತು. ಅದು ಈಗ ₹ 7ಕ್ಕೆ ಇಳಿದಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ ₹ 78.28 ಮತ್ತು ಡೀಸೆಲ್‌ ಬೆಲೆ ₹ 71.08ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ಬೆಲೆ ₹ 81.33ಕ್ಕೆ ಏರಿಕೆಯಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು