ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ, ಬೆಳ್ಳಿ ದರ ಇಳಿಕೆ

Published 22 ಏಪ್ರಿಲ್ 2024, 14:18 IST
Last Updated 22 ಏಪ್ರಿಲ್ 2024, 14:18 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ದರವು ₹450 ಇಳಿಕೆಯಾಗಿ ₹73,650ಕ್ಕೆ ಮಾರಾಟವಾಯಿತು. ಬೆಳ್ಳಿಯು ಕೆ.ಜಿಗೆ ₹1,100 ಹೆಚ್ಚಳವಾಗಿ, ₹85,500ಕ್ಕೆ ಮುಟ್ಟಿದೆ. 

ಮಧ್ಯಪ್ರಾಚ್ಯದ ಬಿಕ್ಕಟ್ಟಿನ ತೀವ್ರತೆ ಕಡಿಮೆಯಾಗಿರುವ ಬೆನ್ನಲ್ಲೇ ಲಾಭ ಗಳಿಕೆಗಾಗಿ ಹೂಡಿಕೆದಾರರು ಹಳದಿ ಲೋಹದ ಮಾರಾಟಕ್ಕೆ ಮುಂದಾಗಿದ್ದಾರೆ. ಹಾಗಾಗಿ, ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. 

ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನವು ₹75,580ಕ್ಕೆ ಮಾರಾಟವಾಯಿತು. ಕೆ.ಜಿ ಬೆಳ್ಳಿಯು ₹84,900ಕ್ಕೆ ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT