ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸತತ ಮೂರನೇ ದಿನವೂ ಕುಸಿದ ಚಿನ್ನ, ಬೆಳ್ಳಿ ಧಾರಣೆ

Published 4 ಸೆಪ್ಟೆಂಬರ್ 2024, 14:33 IST
Last Updated 4 ಸೆಪ್ಟೆಂಬರ್ 2024, 14:33 IST
ಅಕ್ಷರ ಗಾತ್ರ

ನವದೆಹಲಿ: ಸತತ ಮೂರನೇ ದಿನದ ವಹಿವಾಟಿನಲ್ಲೂ ಚಿನ್ನ ಮತ್ತು ಬೆಳ್ಳಿ ಧಾರಣೆ ಚಿನಿವಾರ ಪೇಟೆಯಲ್ಲಿ ಇಳಿಕೆಯಾಗಿದೆ.

10 ಗ್ರಾಂ ಚಿನ್ನದ ದರವು ಬುಧವಾರ ₹450 ಕಡಿಮೆಯಾಗಿ ₹73,600ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಕೆ.ಜಿಗೆ ₹1,650 ಕಡಿಮೆಯಾಗಿ ₹83,600ಕ್ಕೆ ಇಳಿದಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ಹೇಳಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಒಂದು ಔನ್ಸ್‌ಗೆ (28.34 ಗ್ರಾಂ) ಕ್ರಮವಾಗಿ 2,519 ಡಾಲರ್‌ (ಅಂದಾಜು ₹2.11 ಲಕ್ಷ) ಮತ್ತು 29 ಡಾಲರ್‌ನಂತೆ (ಅಂದಾಜು ₹2,385) ಮಾರಾಟವಾಗಿದೆ.

ಕಾರಣವೇನು?: ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಿರುವುದು, ದೇಶೀಯ ಆಭರಣ ತಯಾರಕರು ಮತ್ತು ಮಾರಾಟಗಾರರಿಂದ ಬೇಡಿಕೆ ಕಡಿಮೆಯಾಗಿದ್ದರಿಂದ ಚಿನ್ನದ ಧಾರಣೆಯು ಇಳಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT