ಶನಿವಾರ, ಮೇ 15, 2021
22 °C

ಆರ್‌ಬಿಐನ ಡೆಪ್ಯುಟಿ ಗವರ್ನರ್‌ ಆಗಿ ಟಿ.ರಬಿ ಶಂಕರ್‌ ನೇಮಕ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಆರ್‌ಬಿಐನ ನಾಲ್ಕನೇ ಡೆಪ್ಯುಟಿ ಗವರ್ನರ್‌ ಆಗಿ ಟಿ.ರಬಿ ಶಂಕರ್‌ ಅವರನ್ನು ನೇಮಕ ಮಾಡಲಾಗಿದೆ.

ಬಿಪಿ ಕನೂಂಗೊ ಅವರು ಏಪ್ರಿಲ್‌ 2 ರಂದು ನಿವೃತ್ತಿಯಾದರು. ತೆರವಾಗಿರುವ ಸ್ಥಾನಕ್ಕೆ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕ ಟಿ.ರಬಿ ಶಂಕರ್‌ ಅವರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ.

ರಬಿ ಶಂಕರ್‌ ಅವರು ಫಿನ್‌ಟೆಕ್‌, ಮಾಹಿತಿ ತಂತ್ರಜ್ಞಾನ, ಪಾವತಿ ವ್ಯವಸ್ಥೆಯ ನೇತೃತ್ವವನ್ನು ವಹಿಸಿಕೊಳ್ಳುವ ಸಾಧ್ಯತೆಗಳಿವೆ.

1990ರ ಸೆಪ್ಟೆಂಬರ್‌ನಲ್ಲಿ ರಬಿ ಶಂಕರ್‌ ಅವರು ಸಂಶೋಧನಾ ಅಧಿಕಾರಿಯಾಗಿ ಆರ್‌ಬಿಐಗೆ ಸೇರ್ಪಡೆಯಾದರು.

 

 

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು