ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಎಣ್ಣೆ ಬೆಲೆ ಇಳಿಸಲು ಕೇಂದ್ರ ಸೂಚನೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಣ್ಣೆಗಳ ಬೆಲೆ ತಗ್ಗಿದ ಪರಿಣಾಮ
Last Updated 6 ಜುಲೈ 2022, 19:29 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಇಳಿಕೆ ಆಗಿರುವ ಕಾರಣ, ಆಮದು ಮಾಡಿಕೊಳ್ಳುವ ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ಬೆಲೆಯನ್ನು (ಎಂ ಆರ್‌ಪಿ) ಲೀಟರ್‌ಗೆ ₹ 10ರವರೆಗೆ ಕಡಿತ ಮಾಡಬೇಕು ಎಂದು ಕೇಂದ್ರ ಸರ್ಕಾ ರವು ಕಂಪನಿಗಳಿಗೆ ನಿರ್ದೇಶನ ನೀಡಿದೆ.

ಎಂಆರ್‌ಪಿ ಇಳಿಕೆಯು ಒಂದು ವಾರದಲ್ಲಿ ಜಾರಿಗೆ ಬರಬೇಕು ಎಂದು ಕೇಂದ್ರವು ಹೇಳಿದೆ. ದೇಶಕ್ಕೆ ಅಗತ್ಯವಿರುವ ಅಡುಗೆ ಎಣ್ಣೆಯಲ್ಲಿ ಶೇ 60ರಷ್ಟು ವಿದೇಶಗಳಿಂದ ಆಮದಾ ಗುತ್ತದೆ. ಅಡುಗೆ ಎಣ್ಣೆ ತಯಾರಕ ಕಂಪನಿಗಳು ಹಿಂದಿನ ತಿಂಗಳು ಎಂಆರ್‌ಪಿಯನ್ನು ಲೀಟರಿಗೆ ₹ 10ರಿಂದ ₹ 15ರವರೆಗೆ ತಗ್ಗಿಸಿದ್ದವು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆಯು ಇನ್ನಷ್ಟು ಕಡಿಮೆ ಆಗಿರುವುದನ್ನು ಗಮನಿಸಿ ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಪ್ರಮುಖ ಕಂಪನಿಗಳು, ತಯಾರಕರ ಸಭೆ ಕರೆದಿ ದ್ದರು. ‘ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆಗಳ ಬೆಲೆ ಒಂದು ವಾರದಲ್ಲಿ ಶೇಕಡ 10ರಷ್ಟು ಇಳಿದಿದೆ. ಇದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬೇಕು. ಎಂಆರ್‌ಪಿ ಇಳಿಸಬೇಕು ಎಂದು ಹೇಳಿದ್ದೇವೆ’ ಎಂದು ಪಾಂಡೆ ಸಭೆಯ ನಂತರ ತಿಳಿಸಿದ್ದಾರೆ.

ಆಮದು ಮಾಡಿಕೊಳ್ಳುವ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಎಂಆರ್‌ಪಿಯನ್ನು ಮುಂದಿನ ವಾರದೊಳಗೆ ಲೀಟರಿಗೆ ₹ 10ರವರೆಗೆ ಇಳಿಸುವುದಾಗಿ ಪ್ರಮುಖ ತಯಾರಕರು ಭರವಸೆ ನೀಡಿದ್ದಾರೆ. ಈ ಎಣ್ಣೆಗಳ ಬೆಲೆ ಇಳಿಕೆಯಾದ ನಂತರ, ಇತರ ಅಡುಗೆ ಎಣ್ಣೆಗಳ ಬೆಲೆಯಲ್ಲಿಯೂ ಇಳಿಕೆ ಆಗಲಿದೆ ಎಂದು ಪಾಂಡೆ ಹೇಳಿದ್ದಾರೆ.

‘ಎಂಆರ್‌ಪಿ ನಿಗದಿ ಮಾಡುವಾಗ ಸಾಗಣೆ ವೆಚ್ಚವನ್ನೂ ಪರಿಗಣಿಸಲಾಗಿ ರುತ್ತದೆ. ಹೀಗಾಗಿ, ಒಂದೇ ಬ್ರ್ಯಾಂಡ್‌ನ ಎಣ್ಣೆಗಳ ಎಂಆರ್‌ಪಿಯಲ್ಲಿ ದೇಶದಾದ್ಯಂತ ಏಕರೂಪತೆ ಇರಬೇಕು ಎಂದು ತಯಾರಕರಿಗೆ ಹೇಳಲಾಗಿದೆ. ಇದಕ್ಕೆ ಕಂಪನಿಗಳು ಒಪ್ಪಿಗೆ ಸೂಚಿಸಿವೆ’ ಎಂದು ಪಾಂಡೆ ತಿಳಿಸಿದ್ದಾರೆ.

ಅಡುಗೆ ಎಣ್ಣೆ ಬ್ರ್ಯಾಂಡ್‌ಗಳ ಬಗ್ಗೆ ಗ್ರಾಹಕರಿಂದ ದೂರು ಬರುತ್ತಿರುವುದು ಹೆಚ್ಚಾಗಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಕೆಲವು ಕಂಪನಿಗಳು, ಎಣ್ಣೆಯನ್ನು 15 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪ್ಯಾಕ್ ಮಾಡಲಾಗಿದೆ ಎಂದು ನಮೂದಿಸಿರುತ್ತವೆ. ಈ ತಾಪಮಾನದಲ್ಲಿ ಎಣ್ಣೆಯ ತೂಕ ಕಡಿಮೆ ಆಗಿರುತ್ತದೆ. ಆದರೆ, ಕಡಿಮೆ ಆಗಿರುವ ತೂಕವನ್ನು ಪ್ಯಾಕ್ ಮೇಲೆ ನಮೂದಿಸಿರುವುದಿಲ್ಲ. ಇದು ನ್ಯಾಯಸಮ್ಮತವಲ್ಲ ಎಂಬ ವಿಚಾರ ಸಭೆಯಲ್ಲಿ ಚರ್ಚೆಯಾಗಿದೆ.

‘ಉದಾಹರಣೆಗೆ, 15 ಡಿಗ್ರಿ ಸೆಲ್ಸಿಯಸ್‌ನಲ್ಲಿ 910 ಗ್ರಾಂ ಎಣ್ಣೆಯನ್ನು ಪ್ಯಾಕ್ ಮಾಡಲಾಗಿದೆ ಎಂದು ನಮೂದಾಗಿರುತ್ತದೆ. ವಾಸ್ತವದಲ್ಲಿ, ತೂಕವು 900 ಗ್ರಾಂಗಿಂತ ಕಡಿಮೆ ಆಗಿರುತ್ತದೆ’ ಎಂದು ಪಾಂಡೆ ವಿವರಿಸಿದರು. ಎಣ್ಣೆಯನ್ನು 30 ಡಿಗ್ರಿ ಸೆಲ್ಸಿಯಸ್‌ನಲ್ಲಿ ಪ್ಯಾಕ್ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT