ನವದೆಹಲಿ: 20 ವರ್ಷಕ್ಕಿಂತ ಹಳೆಯದಾದ ವಾಹನಗಳ ಎಫ್.ಸಿ. ಶುಲ್ಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ನವೀಕರಣ ಶುಲ್ಕವನ್ನು ಹೆಚ್ಚಿಸಿದ ಕೆಲವೇ ತಿಂಗಳಲ್ಲಿ ಈ ಹೆಚ್ಚಳ ಆಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಪ್ರಕಾರ, 20 ವರ್ಷಕ್ಕಿಂತ ಹಳೆಯದಾದ ಎಲ್ಎಂವಿಗಳಿಗೆ (ಲಘು ಮೋಟಾರು ವಾಹನ) ಎಫ್.ಸಿ. ಪರೀಕ್ಷೆ ಶುಲ್ಕವನ್ನು ಈಗಿರುವ ₹10 ಸಾವಿರದ ಬದಲು ₹15 ಸಾವಿರಕ್ಕೆ ಹೆಚ್ಚಿಸಲಾಗಿದೆ.

20 ವರ್ಷಗಳಿಗಿಂತ ಹಳೆಯದಾದ ಟ್ರಕ್ ಮತ್ತು ಬಸ್ಸುಗಳ ಎಫ್.ಸಿ. ಪರೀಕ್ಷಾ ಶುಲ್ಕವನ್ನು ಈಗಿನ ₹3,500ರ ಬದಲು ₹25 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇಷ್ಟೇ ವರ್ಷ ಹಳೆಯದಾದ ಮಧ್ಯಮ ಗಾತ್ರದ ವಾಣಿಜ್ಯ ವಾಹನಗಳು ₹20 ಸಾವಿರ ಶುಲ್ಕ, ಲಘು ಮೋಟಾರು ವಾಹನಗಳು ₹15 ಸಾವಿರ ಪಾವತಿಸಬೇಕಿದೆ.

20 ವರ್ಷಗಳಿಗಿಂತ ಹಳೆಯದಾದ ದ್ವಿಚಕ್ರ ವಾಹನಗಳು ಎಫ್.ಸಿ. ಪರೀಕ್ಷೆಯ ಶುಲ್ಕವನ್ನು ಇದುವರೆಗಿನ ₹600ರ ಬದಲು ₹2,000 ಪಾವತಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.