ಗುರುವಾರ , ಆಗಸ್ಟ್ 18, 2022
25 °C

ಚಿನ್ನ: ಆಮದು ಸುಂಕ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚಾಲ್ತಿ ಖಾತೆ ಕೊರತೆಯನ್ನು (ಸಿಎಡಿ) ಮಿತಿಗೊಳಿಸುವ ಹಾಗೂ ಚಿನ್ನದ ಆಮದು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಚಿನ್ನ ಆಮದಿನ ಮೇಲಿನ ಸುಂಕವನ್ನು ಶೇಕಡ 15ಕ್ಕೆ ಹೆಚ್ಚಿಸಿದೆ. ಇದು ಶೇ 10.75 ಆಗಿತ್ತು.

ಈ ಏರಿಕೆಯು ಜೂನ್ 30ರಿಂದಲೇ ಜಾರಿಗೆ ಬಂದಿದೆ. ಈ ಮೊದಲು ಮೂಲ ಕಸ್ಟಮ್ಸ್ ಸುಂಕವು ಶೇ 7.5ರಷ್ಟು ಆಗಿತ್ತು. ಅದು ಈಗ ಶೇ 12.5ಕ್ಕೆ ಹೆಚ್ಚಾಗಿದೆ. ಇದರ ಜೊತೆ, ಶೇ 2.5ರಷ್ಟು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ (ಎಐಡಿಸಿ) ಸೇರಿಕೊಳ್ಳುವುದರಿಂದ, ಚಿನ್ನದ ಮೇಲಿನ ಒಟ್ಟು ಸುಂಕವು ಶೇ 15ರಷ್ಟು ಆಗುತ್ತದೆ.

ಚಿನ್ನದ ಆಮದು ಪ್ರಮಾಣದಲ್ಲಿ ಭಾರಿ ಏರಿಕೆ ಆಗಿದೆ. ಮೇ ತಿಂಗಳಿನಲ್ಲಿ ಒಟ್ಟು 107 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿದೆ. ಜೂನ್ ತಿಂಗಳಿನಲ್ಲಿಯೂ ಚಿನ್ನದ ಆಮದು ಗಣನೀಯವಾಗಿದೆ. ಚಿನ್ನದ ಆಮದು ಹೆಚ್ಚಾಗುತ್ತಿರುವುದು ಸಿಎಡಿ ಮೇಲೆ ಒತ್ತಡ ಸೃಷ್ಟಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು