ನವದೆಹಲಿ: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟವು 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಹೆಚ್ಚಿಸಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್, ‘ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ ₹100 ಹಾಗೂ ಹೋಳಾದ (ಮಿಲ್ಲಿಂಗ್) ಕೊಬ್ಬರಿಗೆ ₹420 ದರ ಹೆಚ್ಚಿಸಲಾಗಿದೆ. ಕ್ವಿಂಟಲ್ ಉಂಡೆ ಕೊಬ್ಬರಿಗೆ ₹12,100 ಸಾವಿರ ಹಾಗೂ ಹೋಳಾದ ಕೊಬ್ಬರಿಗೆ ₹11,582 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ’ ಎಂದು ವಿವರಿಸಿದರು.

ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ (ಸಿಎಸಿಪಿ) ಶಿಫಾರಸು ಅನ್ವಯ ಈ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಇದಕ್ಕಾಗಿ ₹855 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಉತ್ಪಾದನಾ ವೆಚ್ಚಕ್ಕಿಂತಲೂ ಶೇ 50ರಷ್ಟು ಹೆಚ್ಚು ಎಂಎಸ್ಪಿ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.

ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್ಸಿಸಿಎಫ್) ಹಾಗೂ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟವು (ನಾಫೆಡ್) ಕೊಬ್ಬರಿ ಖರೀದಿಸುವ ಕೇಂದ್ರದ ನೋಡಲ್ ಏಜೆನ್ಸಿಗಳಾಗಿವೆ. ಈ ಏಜೆನ್ಸಿಗಳು ಬೆಲೆ ಪ್ರೋತ್ಸಾಹ ಯೋಜನೆಯಡಿ ಕೊಬ್ಬರಿ ಮತ್ತು ಸಿಪ್ಪೆ ಸುಲಿದ ತೆಂಗಿನ ಕಾಯಿಯನ್ನೂ ಖರೀದಿಸುತ್ತವೆ.

ಇಡೀ ದೇಶದ ಕೊಬ್ಬರಿ ಉತ್ಪಾದನೆ ಪೈಕಿ ಕರ್ನಾಟಕದ ಪಾಲು ಶೇ 32.7ರಷ್ಟಿದೆ. ತಮಿಳುನಾಡು ಶೇ 25.7, ಕೇರಳ ಶೇ 25.4 ಹಾಗೂ ಆಂಧ್ರಪ್ರದೇಶವು ಶೇ 7.7ರಷ್ಟು ಪಾಲು ಹೊಂದಿವೆ.

ಎಂಎಸ್ಪಿ ಹೆಚ್ಚಳವು ರೈತರ ಆದಾಯ ಹೆಚ್ಚಳಕ್ಕೆ ನೆರವಾಗಲಿದೆ. ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿನ ಬೇಡಿಕೆಗೆ ಅನುಗುಣವಾಗಿ ಕೊಬ್ಬರಿ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಸರ್ಕಾರ ಹೇಳಿದೆ.

ದೇಶದಲ್ಲಿ ಕೊಬ್ಬರಿ ಋತು ಜನವರಿಯಿಂದ ಆರಂಭವಾಗಲಿದ್ದು, ಏಪ್ರಿಲ್ವರೆಗೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.