ಗುರುವಾರ , ಆಗಸ್ಟ್ 11, 2022
26 °C

ಎಂಎಸ್‌ಎಂಇ ರಫ್ತು ಹೆಚ್ಚಿಸಲು ಕ್ರಮ: ಪ್ರಧಾನಿ ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ (ಎಂಎಸ್‌ಎಂಇ) ರಫ್ತು ವಹಿವಾಟು ಹೆಚ್ಚಿಸಲು ನೆರವಾಗುವ ರೀತಿಯಲ್ಲಿ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಎಂಎಸ್‌ಎಂಇ ವಲಯದ ಸಾಮರ್ಥ್ಯ‌ವನ್ನು ಅರ್ಥಮಾಡಿಕೊಳ್ಳಲು ಆಗುವಂತೆ ನೀತಿ ರೂಪಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

‘ಉದ್ಯಮಿ ಭಾರತ್’ ಕಾರ್ಯಕ್ರಮದಲ್ಲಿ ಎಂಎಸ್‌ಎಂಇಗಳಿಗೆ ಹಲವು ಉತ್ತೇಜನ ಯೋಜನೆಗಳನ್ನು ಬಿಡುಗಡೆ ಮಾಡಿದ ಅವರು, ಭಾರತದ ರಫ್ತು ಹೆಚ್ಚಿಸಲು ಮತ್ತು ಭಾರತದ ಉತ್ಪನ್ನಗಳು ಹೊಸ ಮಾರುಕಟ್ಟೆ ತಲುಪುವಂತಾಗಲು ದೇಶದ ಎಂಎಸ್‌ಎಂಇ ವಲಯವು ಬಲಿಷ್ಠವಾಗುವುದು ಬಹಳ ಮುಖ್ಯ ಎಂದರು.

ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗ ನೀಡುವ (ಆರ್‌ಎಪಿಎಂ) ಯೋಜನೆ, ಮೊದಲ ಬಾರಿಗೆ ರಫ್ತು ಮಾಡುವವರ ಸಾಮರ್ಥ್ಯ ವೃದ್ಧಿ (ಸಿಬಿಎಫ್‌ಟಿಇ) ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೆ ಅವರು ಚಾಲನೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು