ಮಂಗಳವಾರ, ಮಾರ್ಚ್ 21, 2023
25 °C

ತಗ್ಗುತ್ತಿದೆ ಎನ್‌ಪಿಎ ಪ್ರಮಾಣ: ಆರ್‌ಬಿಐ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಬ್ಯಾಂಕ್‌ಗಳ ಒಟ್ಟು ಎನ್‌ಪಿಎ ಪ್ರಮಾಣವು ಏಳು ವರ್ಷಗಳ ಕನಿಷ್ಠ ಮಟ್ಟವಾದ ಶೇಕಡ 5ಕ್ಕೆ ಕುಸಿದಿದೆ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಂಡವಾಳವು ಸಾಕಷ್ಟಿದೆ ಎಂದು ಆರ್‌ಬಿಐ ತಿಳಿಸಿದೆ.

ಎನ್‌ಪಿಎ ಪ್ರಮಾಣದ ಕುಸಿತ ಮುಂದುವರಿಯುವ ಸಾಧ್ಯತೆ ಇದೆ ಎಂದು ಹಣಕಾಸು ಸ್ಥಿರತೆ ವರದಿಯಲ್ಲಿ ಆರ್‌ಬಿಐ ಹೇಳಿದೆ.

ವಾಣಿಜ್ಯ ಬ್ಯಾಂಕ್‌ಗಳ ತೆರಿಗೆ ನಂತರದ ಲಾಭದ ಪ್ರಮಾಣವು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇಕಡ 40.7ರಷ್ಟು ಹೆಚ್ಚಳ ಕಂಡಿದೆ. ಎನ್‌ಪಿಎ ನಷ್ಟ ಭರ್ತಿಗೆ ತೆಗೆದಿರಿಸಬೇಕಾದ ಮೊತ್ತ ಕಡಿಮೆ ಆಗಿದ್ದು, ನಿವ್ವಳ ಬಡ್ಡಿ ಆದಾಯ ಹೆಚ್ಚಾಗಿದ್ದು ಬ್ಯಾಂಕ್‌ಗಳ ತೆರಿಗೆ ನಂತರದ ಲಾಭ ಹೆಚ್ಚಾಗಲು ಮುಖ್ಯ ಕಾರಣ.

ಜಾಗತಿಕ ಅರ್ಥ ವ್ಯವಸ್ಥೆಯು ದೊಡ್ಡ ಸವಾಲುಗಳನ್ನು ಎದುರಿಸುತ್ತಿದೆ. ಆರ್ಥಿಕ ಹಿಂಜರಿತ ಎದುರಾಗುವ ಅಪಾಯಗಳು ಹೆಚ್ಚಾಗಿವೆ ಎಂದು ಕೂಡ ವರದಿಯಲ್ಲಿ ಎಚ್ಚರಿಸಲಾಗಿದೆ. ಹಲವು ಬಗೆಯ ಆಘಾತಗಳು ಒಂದರ ಮೇಲೆ ಇನ್ನೊಂದರಂತೆ ಪರಿಣಾಮ ಬೀರಿದ ಕಾರಣದಿಂದಾಗಿ, ಹಣಕಾಸಿನ ಸ್ಥಿತಿ ಬಿಗಿಗೊಂಡಿದೆ. ಹಣಕಾಸು ಮಾರುಕಟ್ಟೆಗಳಲ್ಲಿ ಅಸ್ಥಿರತೆ ಹೆಚ್ಚಾಗಿದೆ ಎಂದು ವರದಿಯು ಹೇಳಿದೆ.

ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆ ಅರ್ಥವ್ಯವಸ್ಥೆಗಳಿಗೆ ಸವಾಲುಗಳು ಇನ್ನಷ್ಟು ಕಠಿಣವಾಗಿರುತ್ತವೆ. ಇವು ಜಾಗತಿಕ ಪರಿಣಾಮಗಳನ್ನು, ಕರೆನ್ಸಿ ಅಸ್ಥಿರತೆಯನ್ನು ಮತ್ತು ಬಂಡವಾಳದ ಹೊರಹರಿವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು