ಬುಧವಾರ, ಆಗಸ್ಟ್ 21, 2019
22 °C

ಜಿಎಸ್‌ಟಿ ಸಂಗ್ರಹ ಅಲ್ಪ ಹೆಚ್ಚಳ

Published:
Updated:

ನವದೆಹಲಿ: ಜುಲೈ ತಿಂಗಳ ಜಿಎಸ್‌ಟಿ ಸಂಗ್ರಹ ₹ 1.02 ಲಕ್ಷ ಕೋಟಿ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

2018ರ ಜುಲೈನಲ್ಲಿ ಸಂಗ್ರಹವಾಗಿದ್ದ ₹ 96,483 ಕೋಟಿಗೆ ಹೋಲಿಸಿದರೆ ಶೇ 5.8ರಷ್ಟು ಏರಿಕೆಯಾಗಿದೆ.

ಕೇಂದ್ರ ಜಿಎಸ್‌ಟಿ ₹ 17,912 ಕೋಟಿ, ರಾಜ್ಯ ಜಿಎಸ್‌ಟಿ ₹ 25,008 ಕೋಟಿ ಮತ್ತು ಸಮಗ್ರ ಜಿಎಸ್‌ಟಿ ₹ 50,612 ಕೋಟಿ ಸಂಗ್ರವಾಗಿದೆ.

ಜಿಎಸ್‌ಟಿ ಸಂಗ್ರಹವು 2019ರಲ್ಲಿ ಮೊದಲ ಬಾರಿಗೆ ಜೂನ್‌ನಲ್ಲಿ ₹ 1 ಲಕ್ಷ ಕೋಟಿಗಿಂತಲೂ ಕೆಳಗೆ ಇಳಿದಿತ್ತು. ₹ 99,939 ಕೋಟಿ ಸಂಗ್ರಹವಾಗಿತ್ತು.

Post Comments (+)