ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಸಂಗ್ರಹ ₹98,202 ಕೋಟಿಗೆ ಇಳಿಕೆ

Last Updated 1 ಸೆಪ್ಟೆಂಬರ್ 2019, 17:01 IST
ಅಕ್ಷರ ಗಾತ್ರ

ನವದೆಹಲಿ: ಮಂದಗತಿಯ ಆರ್ಥಿಕ ಬೆಳವಣಿಗೆಯಿಂದಾಗಿಆಗಸ್ಟ್‌ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹ ₹ 98,202 ಕೋಟಿಗೆ ಇಳಿಕೆಯಾಗಿದೆ.

ಜುಲೈ ತಿಂಗಳ ಜಿಎಸ್‌ಟಿ ಸಂಗ್ರಹ ₹ 1.02 ಲಕ್ಷ ಕೋಟಿಗಳಷ್ಟಿತ್ತು ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

2019ರ ಜನವರಿಯಿಂದ ಆಗಸ್ಟ್‌ ಅವಧಿಯಲ್ಲಿ ಎರಡನೇ ಬಾರಿಗೆ ಜಿಎಸ್‌ಟಿ ಸಂಗ್ರಹವು ₹ 1 ಲಕ್ಷ ಕೋಟಿಗಿಂತಲೂ ಕೆಳಕ್ಕೆ ಇಳಿದಿದೆ. ಜೂನ್‌ನಲ್ಲಿ ₹ 99,939 ಕೋಟಿ ಸಂಗ್ರಹವಾಗಿತ್ತು.

2018ರ ಆಗಸ್ಟ್‌ನಲ್ಲಿ ಸಂಗ್ರಹವಾಗಿದ್ದ ₹ 93,960 ಕೋಟಿಗೆ ಹೋಲಿಸಿದರೆ 2019ರ ಆಗಸ್ಟ್‌ನಲ್ಲಿನ ಸಂಗ್ರಹವು ಶೇ 4.5ರಷ್ಟು ಏರಿಕೆಯಾಗಿದೆ.

2018ರ ಜುಲೈನಲ್ಲಿ ಸಂಗ್ರಹವಾಗಿದ್ದ ₹ 96,483 ಕೋಟಿಗೆ ಹೋಲಿಸಿದರೆಶೇ 5.8ರಷ್ಟು ಏರಿಕೆಯಾಗಿದೆ.

ಜುಲೈ ತಿಂಗಳಿನ ಜಿಎಸ್‌ಟಿಆರ್‌–3ಬಿ ಸಲ್ಲಿಕೆಯು 75.80 ಲಕ್ಷಕ್ಕೆ ತಲುಪಿದೆ. 2019ರ ಜೂನ್‌–ಜುಲೈ ಅವಧಿಗೆ ರಾಜ್ಯಗಳಿಗೆ ಪರಿಹಾರವಾಗಿ ₹ 27,955 ಕೋಟಿ ಬಿಡುಗಡೆ ಮಾಡಲಾಗಿದೆ.

‘ದೇಶದ ಆರ್ತಿಕತೆ ಮಂದಗತಿಯಲ್ಲಿದ್ದು,ವಾಹನ ಉದ್ಯಮ, ಎಫ್‌ಎಂಸಿಜಿಯನ್ನೂ ಒಳಗೊಂಡು ಹಲವು ವಲಯಗಳು ನಕಾರಾತ್ಮಕ ಮಾರಾಟ ಪ್ರಗತಿ ಕಂಡಿವೆ. ಇದರಿಂದಾಗಿ ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆಯಾಗಿದೆ’ ಎಂದು ಎಎಂಆರ್‌ಜಿ ಆ್ಯಂಡ್‌ ಅಸೋಸಿಯೇಟ್ಸ್‌ನ ಹಿರಿಯ ಪಾಲುದಾರ ರಜತ್‌ ಮೋಹನ್‌ ಅಭಿಪ್ರಾಯಪಟ್ಟಿದ್ದಾರೆ.

ಸಂಗ್ರಹ (ಕೋಟಿಗಳಲ್ಲಿ)

ಸಿಜಿಎಸ್‌ಟಿ;₹17,733

ಎಸ್‌ಜಿಎಸ್‌ಟಿ;₹24,239

ಐಜಿಎಸ್‌ಟಿ;₹48,958

ಸೆಸ್‌;₹7,273

ಸರಾಸರಿ ಜಿಎಸ್‌ಟಿ

₹ 5,14,378 ಕೋಟಿ

2019ರ ಏಪ್ರಿಲ್‌–ಆಗಸ್ಟ್‌

₹4,83,538 ಕೋಟಿ

2018ರ ಏಪ್ರಿಲ್‌–ಆಗಸ್ಟ್‌

2019–20ಕ್ಕೆ ಸಂಗ್ರಹ ನಿರೀಕ್ಷೆ (ಲಕ್ಷ ಕೋಟಿಗಳಲ್ಲಿ)

ಸಿಜಿಎಸ್‌ಟಿ;₹ 6.10

ಸೆಸ್‌;₹1.01

2018–19ರಲ್ಲಿ ಸಂಗ್ರಹ

ಸಿಜಿಎಸ್‌ಟಿ;₹ 4.25 ಲಕ್ಷ ಕೋಟಿ

ಸೆಸ್‌;₹97,000 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT