ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವಾಹನ: ಜಿಎಸ್‌ಟಿ ಕಡಿತ, ಆಗಸ್ಟ್‌ 1 ರಿಂದ ಜಾರಿ

ಮಂಡಳಿ ಸಭೆಯಲ್ಲಿ ನಿರ್ಧಾರ
Last Updated 28 ಜುಲೈ 2019, 1:20 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ವಿದ್ಯುತ್‌ ಚಾಲಿತ ವಾಹನಗಳ (ಇವಿ) ತಯಾರಿಕೆ ಮತ್ತು ಅಳವಡಿಕೆಗೆವೇಗ ನೀಡುವ ಉದ್ದೇಶದಿಂದ ಜಿಎಸ್‌ಟಿ ಮಂಡಳಿಯು ಶೇ 12ರಷ್ಟಿದ್ದ ತೆರಿಗೆಯನ್ನು ಶೇ 5ಕ್ಕೆ ಇಳಿಸಿದೆ.

ಚಾರ್ಜಿಂಗ್‌ ಸ್ಟೇಷನ್‌ಗಳ ಮೇಲಿನ ಜಿಎಸ್‌ಟಿಯನ್ನೂ ಶೇ 18 ರಿಂದ ಶೇ 5ಕ್ಕೆ ತಗ್ಗಿಸಲಾಗಿದೆ.ಇವಿಗಳ ಮೇಲಿನ ಪರಿಷ್ಕೃತ ತೆರಿಗೆ ದರವು ಆಗಸ್ಟ್‌ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಸ್ಥಳೀಯ ಆಡಳಿತ ಸಂಸ್ಥೆ
ಗಳುವಿದ್ಯುತ್‌ ಚಾಲಿತ ಬಸ್‌ಗಳನ್ನು ಬಾಡಿಗೆಗೆ ಪಡೆಯುವುದಕ್ಕೆ (12ಕ್ಕೂ ಹೆಚ್ಚಿನ ಆಸನಗಳಿರುವುದು) ಜಿಎಸ್‌ಟಿಯಿಂದ ವಿನಾಯ್ತಿ ನೀಡಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ ಶನಿವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಜಿಎಸ್‌ಟಿ ಮಂಡಳಿಯ 36ನೇ ಸಭೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

‘ಬ್ಯಾಟರಿ ತೆರಿಗೆಯನ್ನೂ ತಗ್ಗಿಸಿ’

ತೆರಿಗೆ ದರ ಕಡಿತದ ನಿರ್ಧಾರವನ್ನುವಿದ್ಯುತ್‌ ಚಾಲಿತ ವಾಹನ ತಯಾರಕರ ಒಕ್ಕೂಟ (ಎಸ್‌ಎಂಇವಿ) ಮತ್ತು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್‌ಐಎಎಂ) ಸ್ವಾಗತಿಸಿವೆ. ಇದರಿಂದ ದೇಶದಲ್ಲಿ ‘ಇವಿ’ ಅಳವಡಿಕೆಗೆ ವೇಗ ಸಿಗಲಿದೆ ಎಂದು ಅಭಿಪ್ರಾಯಪಟ್ಟಿವೆ.

‘ಬ್ಯಾಟರಿಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ಇದೆ. ಅದನ್ನು ತಗ್ಗಿಸಬೇಕಿದೆ. ಹೀಗಾದಲ್ಲಿ ದೀರ್ಘಾವಧಿಗೆ ವಾಹನಗಳ ಮೇಲೆ ಮಾಡುವ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ’ ಎಂದು ವಿದ್ಯುತ್‌ ಚಾಲಿತ ವಾಹನ ತಯಾರಕರ ಒಕ್ಕೂಟದ (ಎಸ್‌ಎಂಇವಿ) ಪ್ರಧಾನ ನಿರ್ದೇಶಕ ಸೋಹಿಂದರ್‌ ಗಿಲ್‌ಅಭಿಪ್ರಾಯಪಟ್ಟಿದ್ದಾರೆ.

‘ತೆರಿಗೆ ದರ ಕಡಿತದ ಭರವಸೆ ಈಡೇರಿಸಿರುವ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಬಯಸುತ್ತೇವೆ.ವಿದ್ಯುತ್‌ ಚಾಲಿತ ವಾಹನಗಳ ಖರೀದಿಗೆ ತೆರಿಗೆ ಕಡಿತ ಇನ್ನಷ್ಟು ಉತ್ತೇಜನ ನೀಡಲಿದೆ’ ಎಂದುಹುಂಡೈ ಮೋಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಎಸ್‌.ಎಸ್‌. ಕಿಮ್‌ ಹೇಳಿದ್ದಾರೆ. ಹೋಂಡಾ ಕಂಪನಿಯು ಈಚೆಗಷ್ಟೇ ಎಲೆಕ್ಟ್ರಿಕ್‌ ಎಸ್‌ಯುವಿ ಕೋನಾ ಬಿಡುಗಡೆ ಮಾಡಿದೆ.

‘ವರ್ಷಾಂತ್ಯದ ವೇಳೆಗೆ ಭಾರತದಲ್ಲಿ ಔಡಿ ಇ–ಟ್ರೋನ್‌ ಪರಿಚಯಿಸಲು ನಿರ್ಧರಿಸಿದ್ದೇವೆ. ತೆರಿಗೆ ತಗ್ಗಿಸಿರುವುದರಿಂದ ಅನುಕೂಲವಾಗುವ
ನಿರೀಕ್ಷೆ ಇದೆ’ ಎಂದುಔಡಿ ಇಂಡಿಯಾ ಮುಖ್ಯಸ್ಥರಹಿಲ್‌ ಅನ್ಸಾರಿಹೇಳಿದ್ದಾರೆ.

ಉತ್ತೇಜಕ ಕ್ರಮಗಳು:ಕೇಂದ್ರ ಬಜೆಟ್‌ನಲ್ಲಿ,ವಿದ್ಯುತ್ ಚಾಲಿತ ವಾಹನ ಖರೀದಿಸುವ ಸಾಲದ ಬಡ್ಡಿ ಪಾವತಿಗೆ ಆದಾಯ ತೆರಿಗೆಯಲ್ಲಿ ಹೆಚ್ಚುವರಿಯಾಗಿ ₹ 1.5 ಲಕ್ಷ ಕಡಿತ ಕಲ್ಪಿಸಲಾಗಿದೆ.

ದರ ಬದಲಾವಣೆ

ವಿದ್ಯುತ್‌ ಚಾಲಿತ ವಾಹನ; ಶೇ 12 ರಿಂದ 5ಕ್ಕೆ

ಚಾರ್ಜಿಂಗ್‌ ಸ್ಟೇಷನ್‌; ಶೇ18 ರಿಂದ 5ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT