ಗುರುವಾರ , ಮೇ 6, 2021
22 °C
ಜನವರಿ 1ರಿಂದ ಸರಳೀಕೃತ ರಿಟರ್ನ್‌: ಸುಶೀಲ್‌ ಮೋದಿ

ಜಿಎಸ್‌ಟಿ: ಆಧಾರ್ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ವಂಚನೆ ಎಸಗುವುದನ್ನು ತಪ್ಪಿಸಲು 2020ರ ಜನವರಿ 1ರಿಂದ ಜಿಎಸ್‌ಟಿಗೆ ಹೊಸದಾಗಿ ನೋಂದಣಿ ಆಗುವವರಿಗೆ ಆಧಾರ್‌ ದೃಢೀಕರಣ ಕಡ್ಡಾಯಗೊಳಿಸಲಾಗಿದೆ. 

ಶನಿವಾರ ಇಲ್ಲಿ ಸಭೆ ನಡೆಸಿದ ಬಳಿಕ ಜಿಎಸ್‌ಟಿಎನ್‌ ಸಮಿತಿಯ ಮುಖ್ಯಸ್ಥ ಸುಶೀಲ್‌ ಕುಮಾರ್ ಮೋದಿ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

‘ಕ್ರಮೇಣ ಈಗಾಗಲೇ ನೋಂದಣಿ ಆಗಿರುವವರಿಗೂ ಆಧಾರ್‌ ನೀಡುವಂತೆ ಕೇಳಾಗುವುದು’ ಎಂದರು.

ಈಗ, ಜಿಎಸ್‌ಟಿಗೆ ನೋಂದಾಯಿಸಿಕೊಳ್ಳಲು ಆಧಾರ್‌ ಸಂಖ್ಯೆ ನೀಡುವುದು ಒಂದು ಆಯ್ಕೆಯಷ್ಟೇ ಆಗಿದೆ. ಆದರೆ ಎರಡು ವರ್ಷಗಳಲ್ಲಿ ಭಾರಿ ಸಂಖ್ಯೆಯಲ್ಲಿ ನಕಲಿ ಇನ್‌ವಾಯ್ಸ್‌ಗಳು ಸೃಷ್ಟಿಯಾಗಿವೆ. ಹೀಗಾಗಿ ಆಧಾರ್‌ ಕಡ್ಡಾಯಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಮರುಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಆನ್‌ಲೈನ್‌ ವ್ಯವಸ್ಥೆಯನ್ನು ಇದೇ 24ರಿಂದ ಜಾರಿಗೆ ತರಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ವಾಹನ ತೆರಿಗೆ ಕಡಿತ ಅನುಮಾನ
ಜಿಎಸ್‌ಟಿ ಮಂಡಳಿಯು ಶುಕ್ರವಾರ ನಡೆಯಲಿರುವ ಸಭೆಯಲ್ಲಿ ವಾಹನಗಳ ಮೇಲಿನ ಜಿಎಸ್‌ಟಿ ದರದಲ್ಲಿ ಇಳಿಕೆ ಮಾಡುವ ಸಾಧ್ಯತೆ ಕಡಿಮೆ ಇದೆ. 

‘ಜಿಎಸ್‌ಟಿ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ, ನಾನು ಹಲವು ರಾಜ್ಯಗಳ ಹಣಕಾಸು ಸಚಿವರ ಜತೆ ಮಾತುಕತೆ ನಡೆಸಿದ್ದೇನೆ. ಯಾರೂ ವಾಹನ ವಲಯ ಮತ್ತು ಬಿಸ್ಕಿಟ್‌ ಉದ್ಯಮಕ್ಕೆ ವಿನಾಯ್ತಿ ನೀಡಲು ಸಿದ್ಧರಿಲ್ಲ’ ಎಂದು ಸುಶೀಲ್‌ ಪ್ರತಿಕ್ರಿಯೆ ನೀಡಿದರು.

‘ಎರಡರಿಂದ ಮೂರು ತಿಂಗಳಿನಿಂದ ಸೆಸ್‌ ಸಂಗ್ರಹದಲ್ಲಿ ಇಳಿಕೆಯಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ರಾಜ್ಯಗಳಿಗೆ ಪರಿಹಾರ ಸೆಸ್‌ ನೀಡುವುದಕ್ಕೂ ಕೇಂದ್ರಕ್ಕೆ ಕಷ್ಟವಾಗಲಿದೆ. ವರಮಾನ ಸಂಗ್ರಹದಲ್ಲಿ ಸ್ಥಿರತೆ ಸಾಧಿಸದ ಹೊರತು, ಕೇಂದ್ರವಾಗಲಿ ರಾಜ್ಯ ಸರ್ಕಾರಗಳಾಗಲಿ ವರಮಾನ ಕಳೆದುಕೊಳ್ಳಲು ಬಯಸುವುದಿಲ್ಲ’ ಎಂದು ಅವರು ಸದ್ಯದ ಪರಿಸ್ಥಿತಿಯನ್ನು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು