ಶುಕ್ರವಾರ, ಅಕ್ಟೋಬರ್ 30, 2020
24 °C

‘ರಾಯಧನ ತಗ್ಗಿಸಿ, ವೆಚ್ಚ ಕಡಿಮೆ ಮಾಡಿ’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಟೊಮೊಬೈಲ್‌ ಕಂಪನಿಗಳು ಜಿಎಸ್‌ಟಿ ದರ ತಗ್ಗಿಸುವಂತೆ ಸರ್ಕಾರವನ್ನು ಆಗ್ರಹಿಸುವ ಬದಲು, ವಿದೇಶಗಳಲ್ಲಿ ಇರುವ ತಮ್ಮ ಮಾತೃ ಸಂಸ್ಥೆಗಳಿಗೆ ರಾಯಧನ ಪಾವತಿಸುವುದನ್ನು ಕಡಿಮೆ ಮಾಡಬೇಕು ಎಂದು ಹಣಕಾಸು ಇಲಾಖೆಯ ಮೂಲವೊಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಬಹುತೇಕ ಕಂಪನಿಗಳು ಈಗಿನ ತೆರಿಗೆ ವ್ಯವಸ್ಥೆಯಲ್ಲೇ ಬೆಳವಣಿಗೆ ದಾಖಲಿಸಿವೆ. ಭಾರತದಲ್ಲಿ ವಹಿವಾಟು ನಡೆಸುವ ಕಂಪನಿಗಳು ವಿದೇಶಗಳಲ್ಲಿ ಇರುವ ತಮ್ಮ ಮಾತೃ ಸಂಸ್ಥೆಗಳಿಗೆ ಪಾವತಿ ಮಾಡುವ ಬೃಹತ್ ಮೊತ್ತದ ರಾಯಧನವನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ ಎಂದು ಮೂಲಗಳು ಹೇಳಿವೆ.

ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ವಿಧಿಸಲಾಗುತ್ತಿರುವ ತೆರಿಗೆಯು ಮೌಲ್ಯವರ್ಧಿತ ತೆರಿಗೆ ಮತ್ತು ಎಕ್ಸೈಸ್‌ ಸುಂಕದ ಒಟ್ಟು ಪ್ರಮಾಣಕ್ಕಿಂತ ಕಡಿಮೆಯೇ ಇದೆ. ಹೀಗಿದ್ದರೂ, ಉದ್ಯಮದ ಒಂದು ವಲಯದಿಂದ ಇದ್ದಕ್ಕಿದ್ದಂತೆ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿರುವುದು ಆಶ್ಚರ್ಯ
ಕರ ಎಂದು ಅಧಿಕಾರಿಯೊಬ್ಬರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು