ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ದರ ಹೆಚ್ಚಳ ಸಾಧ್ಯತೆ

ವರಮಾನ ಕೊರತೆ ತುಂಬಿಕೊಳ್ಳಲು ಕ್ರಮ; 18ರಂದು ನಿರ್ಧಾರ
Last Updated 11 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವರಮಾನ ಸಂಗ್ರಹ ಹೆಚ್ಚಿಸಲು ತೆರಿಗೆ ದರಗಳನ್ನು ಹೆಚ್ಚಿಸುವ ಸಾಧ್ಯತೆ ಕಂಡುಬರುತ್ತಿದೆ.

ಜಿಎಸ್‌ಟಿ ಸಂಗ್ರಹವು ನಿರೀಕ್ಷಿಸಿದ ಪ್ರಮಾಣಕ್ಕಿಂತ ಕಡಿಮೆಯಾಗಿರುವುದು ಮತ್ತು ರಾಜ್ಯಗಳಿಗೆ ನೀಡುವ ಪರಿಹಾರ ಬಾಕಿ ಇರುವುದರಿಂದ ದರ ಹೆಚ್ಚಳಗೊಳ್ಳಲಿದೆ. ಇದೇ 18ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಸದ್ಯಕ್ಕೆ ಶೇ 5, ಶೇ 12, ಶೇ 18 ಮತ್ತು ಶೇ 28ರ ತೆರಿಗೆ ಹಂತಗಳಿವೆ. ಶೇ 28ರ ತೆರಿಗೆ ವ್ಯಾಪ್ತಿಗೆ ಒಳಪಟ್ಟ ಸರಕು ಮತ್ತು ಸೇವೆಗಳಿಗೆ ಶೇ 1 ರಿಂದ ಶೇ 25ರಷ್ಟು ಹೆಚ್ಚುವರಿ ಶುಲ್ಕವನ್ನೂ (ಸೆಸ್‌) ವಿಧಿಸಲಾಗುತ್ತಿದೆ.

ದರ ಪರಿಷ್ಕರಣೆ: ಜಿಎಸ್‌ಟಿ ದರಗಳನ್ನು ಶೇ 5 ರಿಂದ ಶೇ 8ಕ್ಕೆ ಮತ್ತು ಶೇ 12ರಿಂದ ಶೇ 15ಕ್ಕೆ ಹೆಚ್ಚಿಸುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ತೆರಿಗೆ ಹಂತಗಳನ್ನು ಸದ್ಯದ ನಾಲ್ಕರ ಬದಲಿಗೆ ಮೂರಕ್ಕೆ ಇಳಿಸುವ ಬಗ್ಗೆಯೂ ಸಭೆಯಲ್ಲಿ ಪರಾಮರ್ಶಿಸಲಾಗಿದೆ. ವಿನಾಯ್ತಿ ಪಟ್ಟಿ ಬದಲಿಸುವ ಮತ್ತು ಕೆಲವು ಸೇವೆಗಳ ಮೇಲೆ ಸೆಸ್‌ ವಿಧಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಗಳಿಗೆ ನೀಡುವ ಪರಿಹಾರ ಭರಿಸಲು ಕೆಲ ಸರಕುಗಳ ಮೇಲಿನ ಸೆಸ್‌ ಹೆಚ್ಚಿಸುವುದು ಕೂಡ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಚರ್ಚೆಗೆ ಬರಲಿದೆ.

₹ 5,26,000 ಕೋಟಿ

9 ತಿಂಗಳ ಅವಧಿಯಲ್ಲಿನ ಕೇಂದ್ರ ಸರ್ಕಾರದ ಜಿಎಸ್‌ಟಿ ಸಂಗ್ರಹದ ಬಜೆಟ್‌ ಅಂದಾಜು

₹ 3,28,365 ಕೋಟಿ

ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ಸಂಗ್ರಹವಾದ ‘ಸಿಜಿಎಸ್‌ಟಿ’

40 %

ಬಜೆಟ್‌ ಅಂದಾಜಿಗಿಂತ ಕಡಿಮೆಯಾಗಿರುವ ‘ಸಿಜಿಎಸ್‌ಟಿ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT