ಬುಧವಾರ, ಸೆಪ್ಟೆಂಬರ್ 22, 2021
29 °C

ಜಿಎಸ್‌ಟಿ ತಿಂಗಳ ರಿಟರ್ನ್‌ ಅಕ್ಟೋಬರ್‌ನಿಂದ ಜಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತಿಂಗಳಿಗೆ ಒಮ್ಮೆ ಸಲ್ಲಿಸುವ ಹೊಸ ಜಿಎಸ್‌ಟಿ ರಿಟರ್ನ್‌ ವ್ಯವಸ್ಥೆ ಜಾರಿಗೆ ಬರಲು ಮೂರು ತಿಂಗಳು ವಿಳಂಬವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಹೊಸ ವ್ಯವಸ್ಥೆಯು 2019ರ ಜುಲೈನಿಂದ ಜಾರಿಗೆ ಬರಲಿದೆ ಎಂದು ಜಿಎಸ್‌ಟಿ ಮಂಡಳಿ ಕಳೆದ ವರ್ಷ ಹೇಳಿತ್ತು. ಗಡುವು ವಿಸ್ತರಣೆಯಿಂದಾಗಿ ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ.

ಉದ್ದಿಮೆಗಳು ಹೊಸ ವ್ಯವಸ್ಥೆಯನ್ನುಪ್ರಾಯೋಗಿಕವಾಗಿ  ಜುಲೈನಿಂದ ಸೆಪ್ಟೆಂಬರ್‌ವರೆಗೆ ಬಳಸಬಹುದು. ಅಕ್ಟೋಬರ್‌ನಿಂದ ಜಿಎಸ್‌ಟಿ ಎಎನ್ಎಕ್ಸ್‌–1 ಮತ್ತು ಜಿಎಸ್‌ಟಿ ಎಎನ್‌ಎಕ್ಸ್‌–2 ಬಳಕೆಗೆ ಬರಲಿವೆ. ಸದ್ಯ ಇರುವ ಜಿಎಸ್‌ಟಿಆರ್‌–3ಬಿಗೆ ಬದಲಾಗಿ 2020ರ ಜನವರಿಯಿಂದ ಹೊಸ ಜಿಎಸ್‌ಟಿ ಆರ್‌ಇಟಿ–01 ಜಾರಿಗೆ ಬರಲಿದೆ ಎಂದೂ ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು