ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಲ್ಲಿ ಸಾರ್ವಕಾಲಿಕ ದಾಖಲೆಯ ₹1.68 ಲಕ್ಷ ಕೋಟಿ ಜಿಎಸ್‌ಟಿ ವರಮಾನ ಸಂಗ್ರಹ

Last Updated 1 ಮೇ 2022, 10:46 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಡಿ ಏಪ್ರಿಲ್‌ನಲ್ಲಿ ₹ 1.68 ಲಕ್ಷ ಕೋಟಿ ವರಮಾನ ಸಂಗ್ರಹ ಆಗಿದೆ. ಜಿಎಸ್‌ಟಿ ವ್ಯವಸ್ಥೆಯಡಿ ಈವರೆಗೆ ‌ಸಂಗ್ರಹ ಆಗಿರುವುದರಲ್ಲೇ ಅತ್ಯಂತ ಗರಿಷ್ಠ ಮೊತ್ತ ಇದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಭಾನುವಾರ ತಿಳಿಸಿದೆ.

ಮಾರ್ಚ್‌ನಲ್ಲಿ ₹ 1.42 ಲಕ್ಷ ಕೋಟಿಗಳಷ್ಟು ಗರಿಷ್ಠ ವರಮಾನ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ₹ 25 ಸಾವಿರ ಕೋಟಿಗಳಷ್ಟು ಹೆಚ್ಚು ಸಂಗ್ರಹ ಆದಂತಾಗಿದೆ. ಹಿಂದಿನ ವರ್ಷದ ಏಪ್ರಿಲ್‌ನಲ್ಲಿ ₹ 1.40 ಲಕ್ಷ ಕೋಟಿ ಸಂಗ್ರಹ ಆಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ 20ರಷ್ಟು ಹೆಚ್ಚು ಸಂಗ್ರಹ ಆಗಿದೆ.

ಏಪ್ರಿಲ್‌ನಲ್ಲಿ ಸಂಗ್ರಹ ಆಗಿರುವ ಒಟ್ಟಾರೆ ತೆರಿಗೆಯಲ್ಲಿ ಸಿಜಿಎಸ್‌ಟಿ ₹ 33,159 ಕೋಟಿ, ಎಸ್‌ಜಿಎಸ್‌ಟಿ ₹ 41,793 ಕೋಟಿ, ಐಜಿಎಸ್‌ಟಿ ₹ 81,939 ಕೋಟಿ ಹಾಗೂ ಸೆಸ್‌ ₹ 10,649 ಕೋಟಿ ಒಳಗೊಂಡಿದೆ.

ಏಪ್ರಿಲ್‌ನಲ್ಲಿ ಜಿಎಸ್‌ಟಿಆರ್‌–3ಬಿ ಮೂಲಕ 1.06 ಕೋಟಿ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಕೆ ಆಗಿದ್ದು, ಇದರಲ್ಲಿ 97 ಲಕ್ಷ ರಿಟರ್ನ್ಸ್‌ ಮಾರ್ಚ್‌ಗೆ ಸಂಬಂಧಿಸಿದ್ದಾಗಿದೆ ಎಂದು ಸಚಿವಾಲಯ ಹೇಳಿದೆ.

ತೆರಿಗೆದಾರರು ಸಕಾಲಕ್ಕೆ ರಿಟರ್ನ್ಸ್‌ ಸಲ್ಲಿಸಲು ಆಗುವಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಿಟರ್ನ್ಸ್‌ ಸಲ್ಲಿಕೆ ಪ್ರಕ್ರಿಯೆ ಸರಳಗೊಳಿಸಲಾಗಿದ್ದು, ತೆರಿಗೆ ವಂಚಿಸುವವರ ವಿರುದ್ಧ ಕಠಿಣ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಅದು ತಿಳಿಸಿದೆ.

ಸಕಾಲಕ್ಕೆ ರಿಟರ್ನ್ಸ್‌ ಸಲ್ಲಿಸುವವರಿಗೆ ಮಾತ್ರವೇ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯಲು ಅವಕಾಶ ನೀಡಿರುವುದರಿಂದ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಆಗುತ್ತಿದೆ. ತೆರಿಗೆ ವಂಚನೆ ಪತ್ತೆಗೆ ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆ ಬಳಕೆ ಮಾಡುತ್ತಿರುವುದು ಸಹ ದಾಖಲೆ ಮಟ್ಟದ ತೆರಿಗೆ ಸಂಗ್ರಹಕ್ಕೆ ಕೊಡುಗೆ ನೀಡಿವೆ ಎಂದು ಡೆಲಾಯ್ಟ್‌ ಇಂಡಿಯಾದ ಪಾಲುದಾರ ಎಂ.ಎಸ್‌. ಮಣಿ ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆ ಸಂಗ್ರಹ ವಿವರ (ಲಕ್ಷ ಕೋಟಿಗಳಲ್ಲಿ)

ಜನವರಿ; ₹ 1.40

ಫೆಬ್ರುವರಿ; ₹ 1.33

ಮಾರ್ಚ್‌; ₹ 1.42

ಏಪ್ರಿಲ್‌; ₹ 1.68

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT