ನವದೆಹಲಿ: ಉತ್ಪನ್ನಗಳ ತಯಾರಕರು ಮತ್ತು ಆಮದುಗಾರರು ಜಿಎಸ್ಟಿ ದರದಲ್ಲಿ ಆಗಿರುವ ಪರಿಷ್ಕರಣೆಯನ್ನು ಪ್ರತಿಫಲಿಸುವ ರೀತಿಯಲ್ಲಿ ಹೊಸ ಎಂಆರ್ಪಿ ದರವನ್ನು ಉತ್ಪನ್ನಗಳ ಮೇಲೆ ಪ್ರಕಟಿಸಬೇಕು ಎಂದು ಕೇಂದ್ರ ಸರ್ಕಾರವು ಮಂಗಳವಾರ ಸೂಚನೆ ನೀಡಿದೆ.

ಉತ್ಪನ್ನಗಳನ್ನು ಪ್ಯಾಕ್ ಮಾಡಲು ಬಳಸುವ ಪೊಟ್ಟಣಗಳ ಮೇಲೆ ಹಳೆಯ ಎಂಆರ್ಪಿ ಇದ್ದರೆ, ಅವುಗಳನ್ನು ಡಿಸೆಂಬರ್ 31ರವರೆಗೆ ಅಥವಾ ಅವುಗಳ ದಾಸ್ತಾನು ಇರುವವರಿಗೆ (ಇವೆರಡರಲ್ಲಿ ಯಾವುದು ಮೊದಲೋ ಅದು ಅನ್ವಯ) ಬಳಕೆ ಮಾಡಬಹುದು ಎಂದು ಹೇಳಿದೆ. ಆದರೆ, ಇಂತಹ ಪೊಟ್ಟಣಗಳ ಮೇಲೆ ಪರಿಷ್ಕೃತ ಎಂಆರ್ಪಿಯನ್ನೂ ಪ್ರಕಟಿಸಬೇಕಾಗುತ್ತದೆ.

ವಿವಿಧ ಉತ್ಪನ್ನಗಳು ಹಾಗೂ ಸೇವೆಗಳ ಮೇಲಿನ ಜಿಎಸ್ಟಿ ಪ್ರಮಾಣವನ್ನು ಜಿಎಸ್ಟಿ ಮಂಡಳಿ ತಗ್ಗಿಸಿದೆ. ಪರಿಷ್ಕೃತ ಜಿಎಸ್ಟಿ ದರವು ಸೆಪ್ಟೆಂಬರ್ 22ರಿಂದ ಜಾರಿಗೆ ಬರುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರವು ಕಂಪನಿಗಳಿಗೆ ಈ ಸೂಚನೆ ನೀಡಿದೆ.

‘ತಯಾರಕರು, ಪ್ಯಾಕ್ ಮಾಡುವವರು ಮತ್ತು ಆಮದುದಾರರು ಮಾರಾಟವಾಗದ ಉತ್ಪನ್ನಗಳ ಮೇಲಿನ ಎಂಆರ್ಪಿ ದರವನ್ನು ಡಿಸೆಂಬರ್ 31ರವರೆಗೆ (ಅಥವಾ ದಾಸ್ತಾನು ಖಾಲಿಯಾಗುವವರೆಗೆ) ಪರಿಷ್ಕರಿಸಬಹುದು. ಪರಿಷ್ಕರಿಸುವ ದರವು ಜಿಎಸ್ಟಿಯಿಂದ ಆದ ಬದಲಾವಣೆಯನ್ನು ಮಾತ್ರ ತೋರಿಸಬೇಕು. ತೆರಿಗೆಯಿಂದ ಆದ ಹೆಚ್ಚಳ ಅಥವಾ ಇಳಿಕೆಯನ್ನು ಮಾತ್ರ ಅದರಲ್ಲಿ ತೋರಿಸಬಹುದು’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಎಕ್ಸ್ ಮೂಲಕ ತಿಳಿಸಿದ್ದಾರೆ.

ಸ್ಟಿಕ್ಕರ್ ಬಳಸಿ, ಸ್ಟ್ಯಾಂಪ್ ಬಳಸಿ ಅಥವಾ ಆನ್ಲೈನ್ ಪ್ರಿಂಟ್ ಮೂಲಕ ಪರಿಷ್ಕೃತ ಎಂಆರ್ಪಿಯನ್ನು ತೋರಿಸಬಹುದು. ಜೊತೆಯಲ್ಲೇ, ಮೂಲ ಎಂಆರ್ಪಿ ಕೂಡ ಕಾಣುವಂತೆ ಇರಬೇಕು ಎಂದು ಸೂಚಿಸಲಾಗಿದೆ. ಬೆಲೆಯಲ್ಲಿನ ಪರಿಷ್ಕರಣೆಗೆ ಸಂಬಂಧಿಸಿದಂತೆ ತಯಾರಕರು, ಪ್ಯಾಕ್ ಮಾಡುವವರು ಅಥವಾ ಆಮದುದಾರರು ಕನಿಷ್ಠ ಎರಡು ಜಾಹೀರಾತುಗಳನ್ನು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಪತ್ರಿಕೆಗಳ ಮೂಲಕ ನೀಡಬೇಕಿದೆ.

ಬೆಲೆ ಪರಿಷ್ಕರಣೆ ಬಗ್ಗೆ ಗ್ರಾಹಕರಿಗೆ ಜಾಹೀರಾತು ಹಾಗೂ ಸಾರ್ವಜನಿಕ ನೋಟಿಸ್ ಮೂಲಕ ಮಾಹಿತಿ ನೀಡಬೇಕು. ಇದರಿಂದಾಗಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು, ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ ಎಂದು ಜೋಶಿ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.