ಎಚ್‌ಸಿಎಲ್ ಟೆಕ್: ₹ 4,096 ಕೋಟಿ ನಿವ್ವಳ ಲಾಭ

ನವದೆಹಲಿ: ಎಚ್‌ಸಿಎಲ್ ಟೆಕ್ನಾಲಜೀಸ್ ಕಂಪನಿಯು ಡಿಸೆಂಬರ್ ತ್ರೈಮಾಸಿಕದಲ್ಲಿ ಮಾರುಕಟ್ಟೆ ನಿರೀಕ್ಷೆಗಳನ್ನೂ ಮೀರಿ ₹ 4,096 ಕೋಟಿ ನಿವ್ವಳ ಲಾಭ ಗಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹ 3,442 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಲಾಭವು ಶೇ 19ರಷ್ಟು ಏರಿಕೆ ಆಗಿದೆ. ವರಮಾನವು ₹ 22,331 ಕೋಟಿಯಿಂದ ₹ 26,700 ಕೋಟಿಗೆ (ಶೇ 19.56) ಏರಿಕೆ ಕಂಡಿದೆ. ತ್ರೈಮಾಸಿಕದಲ್ಲಿ 17 ಒಪ್ಪಂದಗಳನ್ನು ಮಾಡಿಕೊಂಡಿರುವುದೇ ಕಂಪನಿಯ ಲಾಭದಲ್ಲಿ ಭಾರಿ ಏರಿಕೆಗೆ ಕಾರಣವಾಗಿದೆ.
ತ್ರೈಮಾಸಿಕದಲ್ಲಿ 2,945 ಮಂದಿ ನೇಮಕ ಆಗಿದ್ದು, ಒಟ್ಟು ಸಿಬ್ಬಂದಿ ಸಂಖ್ಯೆ 2,22,270ಕ್ಕೆ ತಲುಪಿದೆ. ಕಂಪನಿಯು ಪೂರ್ತಿವರ್ಷಕ್ಕೆ ವರಮಾನವು ಶೇ 13.5 ರಿಂದ ಶೇ 14ರಷ್ಟು ಬೆಳವಣಿಗೆ ಕಾಣಲಿದೆ ಎಂದು ಹೇಳಿದೆ. ಶೇ 13.5 ರಿಂದ ಶೇ 14.5ರವರೆಗೆ ಬೆಳವಣಿಗೆ ಕಾಣಲಿದೆ ಎಂದು ಈ ಮೊದಲು ಅಂದಾಜು ಮಾಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.